ಜಿಲ್ಲೆ

ಸಿಮೆಂಟ್​ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ

ಕಲಬುರಗಿ: ಸೇಡಂ ತಾಲೂಕಿನ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕನ ಶವ ಎಳೆದುಕೊಂಡು ಅಮಾನವೀಯವಾಗಿ ವರ್ತಿಸಿದ ಆಡಳಿತ ಮಂಡಳಿ, ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕಲಬುರಗಿ ಸಹಾಯಕ ಆಯುಕ್ತರಿಗೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಫೆಡರೇಷನ್‌ನಿಂದ ಮನವಿ ಸಲ್ಲಿಸಲಾಯಿತು. ಹಣಮಂತರಾಯ ಪೂಜಾರಿ, ಅಶೋಕ ರಾಠೋಡ, ನಾಗಪ್ಪ ರಾಯಚೂರಕರ್, ಸಂಜುಕುಮಾರ ಗುತ್ತೇದಾರ್ ಇತರರಿದ್ದರು.