ಜಿಲ್ಲೆ

ಸಿಮಿಕೇರಿಯಲ್ಲಿ ವೈಭವದ ಓಕಳಿ ಸಂಭ್ರಮ

ಬಾಗಲಕೋಟೆ: ಸಮೀಪದ ಸಿಮಿಕೇರಿ ಗ್ರಾಮದಲ್ಲಿ 28 ವರ್ಷದ ಬಳಿಕ ಇದೆ ಮೊದಲ ರವಿವಾರ ಶ್ರೀ ಆಂಜನೇಯನ ಓಕಳಿ ಸಂಭ್ರಮದಿಂದ ಜರುಗಿ ಗತ ವೈಭವಕ್ಕೆ ಸಾಕ್ಷಿಯಾಯಿತು.

ಸಿಮಿಕೇರಿ ಗ್ರಾಮದ ಶ್ರೀ ಆಂಜನೇಯ ಓಕಳಿ ಸಂಭ್ರಮ ಇದೆ ಮೊದಲ ಬಾರಿಗೆ ಅದು 28 ವರ್ಷದ ಬಳಿಕ ಸಂಭ್ರಮದ ಸಡಗರದಿಂದ ಗ್ರಾಮಸ್ಥರ ಸಮ್ಮೂಕದಲ್ಲಿ ವೈಭದಿಂದ ನಡೆಯಿತು.

ಗ್ರಾಮದಲ್ಲಿ ಗ್ರಾಮ ದೇವತೆಯ ಉಡಿ ತುಂಬುವ ಕಾರ್ಯಕ್ರಮ ಹಾಗೂ ಹನುಮಂತ ದೇವರ ಓಕುಳಿ ಉತ್ಸವ ಅಂಗವಾಗಿ ಶನಿವಾರ ಬೇಳಗಿನ ಜಾವ ಶ್ರೀ ಆಂಜನೇಯನಿಗೆ ಪಂಚಾಮೃತ ಅಭಿಷೇಕ, ಏಲಿ ಪೂಜೆ, ಶ್ರೀರಾಮನಾಮ ಜಪ, ಆಂಜನೇಯ ಚಾಲೀಸ್ ಪಠಣ, ಪುಷ್ಪಾಲಂಕಾರ, ಮಹಾಮಂಗಳಾರುತಿಯೊAದಿಗೆ ವಿಶೇಷ ಪೂಜಾ ಕೈಕಂರ್ಯಗಳು ಜರುಗಿದವು, ಗ್ರಾಮದ ಜನತೆಗೆ ಪ್ರಸಾದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು., ರವಿವಾರ ಬೆಳಿಗ್ಗೆ ಬರಮಪ್ಪ ಅಂಬ್ಲಿಕೊಪ್ಪ ಅವರು ಬಂಡಿಯ ಮುಖಾಂತರ ಓಕಳಿ ಹೊಂಡವನ್ನು ಭರಮದೇವರ ಗುಡಿ ಹತ್ತಿರವಿರು ಐತಿಹಾಸಿಕ ಭಾವಿಯಿಂದ ಬಂಡಿಯಲ್ಲಿ ನೀರನ್ನು ಡೊಳ್ಳು ಹಾಗೂ ಹಲಗೆ ಮೇಳದೊಂಗೆ ಮೇರವಣಿಗೆ ಮೂಲಕ ಬಂದು ತುಂಬಿಸಲಾಯಿತು, ನಂತರ ಸಂಜೆ ಓಕಳಿ ಹೊಂಡದಲ್ಲಿ ತುಂಬಿದ ನೀರಿನಲ್ಲಿ ಯುವಕರು ಮಿಂದೆದ್ದು ನೀರನ್ನು ಏರೆಚುತ್ತಾ ಓಕಳಿ ಆಡಿದ್ದು ನೆರೆದ ಜನರನ್ನು ಅನುರಂಜಿಸಿತು.


ಕಳೆದ 28 ವರ್ಷಗಳಿಂದ ನಿಂತು ಹೋಗಿದ್ದ ಓಕುಳಿ ಉತ್ಸವ ಈ ವರ್ಷ ಅತ್ಯಂತ ವಿಜ್ರಂಭಣೆಯಿಂದ ಜರುಗಿತು. ಇತ್ತೀಚೆಗೆ ಮಳೆ ಬೆಳೆ ಸಾಂಪ್ರದಾಯವನ್ನು ಸಾರುವ ಸಾರುವ ಅಯ್ಯನವರು ಗ್ರಾಮಕ್ಕೆ ಭೇಟಿ ನೀಡಿದಂತಹ ಸಮಯದಲ್ಲಿ ಗ್ರಾಮದ ಸುತ್ತಮುತ್ತ ಮಳೆ ಆಗದಿರುವ ಬಗ್ಗೆ ಕೇಳಿದಾಗ ಅವರು ಊರಲ್ಲಿ ನಿಂತು ಹೋಗಿರುವ ಓಕುಳಿ ಉತ್ಸವ ಪುನಃ ಆರಂಭಿಸಿ ಎಂದು ಸಲಹೆ ನೀಡಿದರು. ಅವರ ಸಲಹೆಯೆಂತೆ ಓಕ್ಕುಳಿ ಕೊಂಡವನು ಅಗೆದ ದಿನವೇ ಸಂಜೆ ಸಾಕಷ್ಟು ಮಳೆಯಾಗಿದೆ. ಆದಕಾರಣ ಓಕುಳಿಯನ್ನು ಅತ್ಯಂತ ಶೃದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು ಎಂದು ಗ್ರಾಮದ ಮುಖಂಡರಾದ ವೀರಭದ್ರಪ್ಪ ನಾಯಕ ತಿಳಿಸಿದರು, ಇದೆ ಸಂದರ್ಭದಲ್ಲಿ ಮಳೆ ಬೆಳೆಗಾಗಿ ಆಂಜನೇಯನಿಗೆ ಹಾಗೂ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಮಳೆ ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಗ್ರಾಮದ ಹಿರಿಯರಾದ ಮಹದೇವಪ್ಪ ತಳವಾರ ತಿಳಿಸಿದರು.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಗ್ರಾಮದ ಹಿರಿಯರಾದ ಮಹದೇವಪ್ಪ ತಳವಾರ, ವೀರಭದ್ರಪ್ಪ ನಾಯಕ, ತಿಪ್ಪಣ್ಣ ಹೊರಕೇರಿ, ಎಚ್. ಐ ನಾಯಕ, ಬಾಳಪ್ಪ ಹಟ್ಟಿ, ಈರಪ್ಪ ಕವಳ್ಳಿ, ಸಿದ್ದಪ್ಪ ಹೊರಕೇರಿ, ರಾಜು ಸುನಗದ, ಶಿವು ತಳವಾರ, ಹಾಗೂ ಸಮಸ್ತ ಗ್ರಾಮದ ಗುರುಹಿರಿಯರು ಸೇರಿದಂತೆ ಸಿಮಿಕೇರಿ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.