ಜಿಲ್ಲೆ

ಸಿಬಿಐ ತನಿಖೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣ ಸಿಬಿಐ, ಸಿಒಡಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್.ಮೂರ್ತಿ ಸ್ಥಾಪಿತ), ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಮೃತ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ, ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ, ತಲಾ 3 ಎಕರೆ ಜಮೀನು ಮಂಜೂರಾತಿ, ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿ ನರಳಾಡಿದ ಪ್ರತಿಯೊಬ್ಬರಿಗೂ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸಮಿತಿ ಜಿಲ್ಲಾ ಅಧ್ಯಕ್ಷ ಸಿ.ಎಚ್.ಮಂಜುನಾಥ, ಜಗದೀಶ್, ಶಾಂತಕುಮಾರ್, ಡಿ.ಶಿವಣ್ಣ, ವೀರಭದ್ರಪ್ಪ, ಮಂಜುನಾಥ, ಮದನ್‌ಬಾಬು, ಓ.ಮಂಜುನಾಥ, ಪ್ರಕಾಶ್, ಮಾರುತಿ, ಆನಂದ, ಮೂರ್ತಪ್ಪ, ಕರಿಯಪ್ಪ, ನಾಗರಾಜು, ರಾಜ, ವಿಶ್ವನಾಥ ಇತರರಿದ್ದರು.