ಜಿಲ್ಲೆ

ಸಿಪಿಐ ಪಾಟೀಲ್ ಗೆ ಸಿಎಂ ಪದಕ

ವಿಜಯಪುರ: ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಸಿಪಿಐ ಡಿ ಬಿ ಪಾಟೀಲ್ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. 2020ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಡಿ ಬಿ ಪಾಟೀಲ್ ಆಯ್ಕೆಯಾಗಿದ್ದಾರೆ ಎಂದು ಆಡಳಿತ ವಿಭಾಗದ ಐಜಿಪಿ ಆಗಿರುವ ಕೆ ವಿ ಶರತಚಂದ್ರ ಆದೇಶ ಹೊರಡಿಸಿದ್ದಾರೆ. ಪ್ರಸ್ತುತವಾಗಿ ವಿಜಯಪುರ ರೇಲ್ವೆ ಪೊಲೀಸ್ ಸರ್ಕಲ್‌ ನಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿರುವ ಡಿ ಬಿ ಪಾಟೀಲ್ ಅವರು ಮೂಲತಹ ಬಾಗಲಕೋಟೆ ಜಿಲ್ಲೆ ಛಬ್ಬಿ ಗ್ರಾಮದವರಾಗಿದ್ದಾರೆ. 2003ರಲ್ಲಿ ಪೊಲೀಸ್ ಇಲಾಖೆ ಸೇರಿದ ಡಿ ಬಿ ಪಾಟೀಲ್ ಅವರು ಬಾಗಲಕೋಟೆ, ಗದಗ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೋವಿಡ್ ಮಹಾಮಾರಿ ವಕ್ಕರಿಸಿ ಲಾಕಡೌನ್ ಆದಂತಹ ಸಂದರ್ಭದಲ್ಲಿ ಕರ್ತವ್ಯದೊಂದಿಗೆ ನಿರ್ಗತಿಕರಿಗೆ, ಬಡವರಿಗೆ ಮಾಸ್ಕ್ ಹಾಗೂ ಅಹಾರ ಸಾಮಗ್ರಿಗಳನ್ನು ವಿತರಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.