ಜಿಲ್ಲೆ

ಸಿಪಿಐ ನಾಯ್ಕೋಡಿ ಸಹಿತ ನಾಲ್ವರಿಗೆ ಸಿಎಂ ಪದಕ

ವಿಜಯಪುರ: ಗಾಂಧಿ ಚೌಕ್ ಸಿಪಿಐ ರವೀಂದ್ರ ಕೆ. ನಾಯ್ಕೋಡಿ ಸೇರಿದಂತೆ ಜಿಲ್ಲೆಯ ನಾಲ್ವರು ಪೊಲೀಸರಿಗೆ 2017-18ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.

ನ. 6 ರಂದೇ ಆಯ್ಕೆ ಪಟ್ಟಿ ಪ್ರಕಟಗೊಂಡಿದ್ದು ನ. 20 ರಂದು ಬೆಳಗ್ಗೆ 9ಕ್ಕೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುತ್ತಿದೆ.

ಡಿಸಿಐಬಿ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಜಯವಂತ ಎ. ದುಲಾರಿ, ಆದರ್ಶ ನಗರದ ಎಎಸ್‌ಐ ಸಿದ್ರಾಮ ಎಸ್. ಮಾಲೆಗಾಂವ, ಎಪಿಎಂಸಿ ಸಿಪಿಸಿ ಶಿವಾನಂದ ಅಳ್ಳಿಗಿಡದ ಸಹ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಸದರಿ ಪದಕ ವಿಜೇತರು ನ. 17 ರಂದು ನಡೆಯುವ ಪೂರ್ವಾಭ್ಯಾಸದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ತಿಳಿಸಲಾಗಿದೆ.