ಜಿಲ್ಲೆ

ಸಿದ್ಧೇಶ್ವರ ಶ್ರೀಗಳ ಮಾತು ನಡೆಸಿಕೊಟ್ಟ ಎಂಬಿಪಿ

ಗಿರೀಶ ಸಗರ

ವಿಜಯಪುರ: ನಮ್ಮ ಜಿಲ್ಲೆಯ ಭೂಮಿಗಳಿಗೆ ಬೊಗಸೆ ನೀರು ಕೊಟ್ಟರೆ ಸಾಕು, ನಮ್ಮ ರೈತರು ಬಂಗಾರ ಬೆಳೆಯುತ್ತಾರೆ ಎಂದು ನುಡಿದ ಲಿಂ. ಸಿದ್ಧೇಶ್ವರ ಶ್ರೀಗಳ ಮಾತನ್ನು ಹಿಂದಿನ ಸರ್ಕಾರದಲ್ಲಿ ನೀರಾವರಿ ಖಾತೆ ನಿರ್ವಹಿಸಿದ ನಮ್ಮ ಅಣ್ಣ ಎಂ.ಬಿ. ಪಾಟೀಲರು ಅನುಷ್ಠಾನಗೊಳಿಸಿದ್ದಾರೆ ಎಂದು ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ತಿಕೋಟಾ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಜಾಕೀರ್​ ಫರ್ಟಿಲೈಜರ್​ ಏಜೆನ್ಸಿಯ ಮಳಿಗೆಯನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

2013 ರಿಂದ 2018ರ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಜಲ ಸಂಪನ್ಮೂಲ ಖಾತೆ ದೊರೆತದ್ದು ಸುದೈವ. ಸತತ ಬರಕ್ಕೆ ತುತ್ತಾಗುತ್ತಿರುವ ಈ ಜಿಲ್ಲೆಗೆ ಕೃಷ್ಣಾ ನದಿಯಿಂದ ಅತಿ ಎತ್ತರ ಪ್ರದೇಶಕ್ಕೆ ನೀರು ಹರಿಸಿದ್ದು ಸದ್ಯ ಇತಿಹಾಸ ಎಂದರು.

ಕೆಲವರು ನಮ್ಮನ್ನು ನೋಡಿ ಕಾಲಲ್ಲಿ ನೀರು ಬಂದವು ಎಂದು ತಮ್ಮ ಪ್ಯಾಂಟ್​ ಮೇಲೆ ಎತ್ತರಿಸಿ ಕುಹಕ ಮಾಡಿದ್ದರು. ಅಂಥವರಿಗೆ ಸದ್ಯ ತಕ್ಕ ಉತ್ತರ ಸಿಕ್ಕಿದೆ. ನೀರಾವರಿ ಸೌಲಭ್ಯ ಹೆಚ್ಚಾಗಿದ್ದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಇಂತಹ ಕೃಷಿ ಪರಿಕರಗಳ ಮಳಿಗೆಗಳು ಹೆಚ್ಚಾಗುತ್ತಿವೆ ಎಂದರು.

ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅರ್ಕಾಟ ದರ್ಗಾದ ಡಾ. ಸೈಯ್ಯದಶಹಾ ತಕಿಪೀರಾಹುಸೇನಿ ಹಾಗೂ ಸೈಯ್ಯದಶಹಾ ಹುಜುರ ಅಹ್ಮದ ಹುಸೇನಿ ಸಜ್ಜಾದ ನಶೀನ ಹಜರತ್​ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಜಾಕೀರ ಸಮೂಹ ಸಂಸ್ಥೆ, ರೈತ ಮಿತ್ರ ಸಹಕಾರಿ ಸಂದ ಅಧ್ಯಕ್ಷ ಎಚ್​.ಎಂ. ಬಾಗವಾನ ಅಧ್ಯತೆ ವಹಿಸಿದ್ದರು. ತೋಟಗಾರಿಕೆ ಉಪನಿರ್ದೇಶಕ ರಾಹುಲಕುಮಾರ ಭಾವಿದೊಡ್ಡಿ, ಸಹಾಯಕ ನಿರ್ದೇಶಕಿ ಶಾಲಿನಿ ತಳಕೇರಿ ಆಗಮಿಸಿದ್ದರು.

ನಾಗಠಾಣ ಶಾಸಕ ವಿಠಲ ಕಟಕದೊಂಡ, ಬಾಲ ವಿಕಾಸ ಅಕಾಡೆಮಿ ಅಧ್ಯ ಸಂಗಮೇಶ ಬಬಲೇಶ್ವರ, ಜಿಲ್ಲಾ ಕಾಂಗ್ರೆಸ್​ ಅಧ್ಯ ಮಲ್ಲಿಕಾರ್ಜುನ ಲೋಣಿ, ಡಾ. ಕೌಸರ ನಿಯಾಜ್​ ಅತ್ತಾರ, ಎಲ್​.ಎಲ್​. ಉಸ್ತಾದ, ಬಸಯ್ಯ ವಿಭೂತಿ, ವಿ.ಎಂ. ಪಾಟೀಲ, ಎಂ.ಎ. ಬಾಗವಾನ, ಎಸ್​.ಎಂ. ಪಾಟೀಲ (ಗಣಿಹಾರ) ಎಂ.ಸಿ. ಮುಲ್ಲಾ, ರಾಮು ದೇಸಾಯಿ, ಮಮ್ಮು ಮುಜಾವರ, ಗೌಸ್​ ಬಾಗವಾನ ಮತ್ತಿತರರಿದ್ದರು.

ವದಲಿ ಸದಾಶಿವ ಮಂಗಸೂಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಭೂಸಗೊಂಡ ನಿರೂಪಿಸಿದರು. ಹುಸೇನಬಾಷಾ ಮುಲ್ಲಾ ವಂದಿಸಿದರು. ಶಾಸಕ ವಿಠಲ ಕಟಕಟದೊಂಡ, ಸಂಗಮೇಶ ಬಬಲೇಶ್ವರ, ಎಚ್​.ಎಂ. ಬಾಗವಾನ ಮತ್ತಿತರರಿದ್ದಾರೆ.

ಫೋಟೋ : ಎಂಎಂ 31&5

ತಿಕೋಟಾ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಜಾಕೀರ ಫರ್ಟಿಲೈಜರ್​ ಏಜೆನ್ಸಿಯ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಿ.ಪ. ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿದರು. ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅರ್ಕಾಟ ದರ್ಗಾದ ಡಾ. ಸೈಯ್ಯದಶಹಾ ತಕಿಪೀರಾಹುಸೇನಿ ಇತರರಿದ್ದರು.