ಇಂಡಿಯ ಜಿಆರ್‌ಜಿ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಿದ್ಧೇಶ್ವರ ಶ್ರೀಗಳಿಗೆ ಕಾವ್ಯ ಹಾಗೂ ಗೀತ ನಮನ ಕಾರ್ಯಕ್ರಮದಲ್ಲಿ ಕವಿಗಳನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಸಿದ್ಧೇಶ್ವರ ಶ್ರೀ ಜೀವನ ಸ್ಪೂರ್ತಿಗಾದೆ

Vijayapura - Desk - Parashuram Keri

ಇಂಡಿ: ಜ್ಞಾನದಾತರಾದ ಸಿದ್ಧೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ಜನರಿಗೆ ದಾರಿ ದೀಪವಾಗಿದ್ದರು. ಅವರ ಜೀವನವೇ ಸ್ಪೂರ್ತಿಗಾದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಪಟ್ಟಣದ ಜಿಆರ್‌ಜಿ ಕಲಾ, ವೈ.ಎ. ಪಾಟೀಲ ವಾಣಿಜ್ಯ ಹಾಗೂ ಎಂ.ಎಫ್. ದೋಶಿ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಕಸಾಪ ಇಂಡಿ ತಾಲೂಕು ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಸಿದ್ಧೇಶ್ವರ ಶ್ರೀಗಳಿಗೆ ಕಾವ್ಯ ಹಾಗೂ ಗೀತ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಝಳಕಿಯ ಸಹಾಯಕ ಪ್ರಾಧ್ಯಾಪಕ ರವಿಕುಮಾರ ಅರಳಿ ಮಾತನಾಡಿ, ಶ್ರೀಗಳು ವಿದೇಶಗಳಲ್ಲಿನ ತತ್ವಗಳ ಅಧ್ಯಯನ ಮಾಡಿದ ವಿಶ್ವಶ್ರೇಷ್ಠ ಸಂತರು. 19ನೇಯ ವಯಸ್ಸಿನಲ್ಲಿ ಸಿದ್ಧಾಂತ ಶಿಖಾಮಣಿ ರಚಿಸಿದ ಶ್ರೇಷ್ಠರು. ಎಲ್ಲರನ್ನು ಸಮನಾಗಿ ನೋಡಿಕೊಂಡು ಸಾತ್ವಿಕ ಬೋಧನೆ ಮಾಡಿದವರು. ವೇದ ಉಪನಿಷತ್ತಗಳನ್ನು ಸಾಮಾನ್ಯ ಭಾಷೆಯಲ್ಲಿ ನೀಡಿದ ಸಂತರು. 12ನೇ ಶತಮಾನದಲ್ಲಿರುವ ಶರಣ ಸಾಹಿತ್ಯವನ್ನು 21ನೇಯ ಶತಮಾನದಲ್ಲಿ ನೀಡಿದ್ದಾರೆ. ಒಳ್ಳೆಯದು ಹೇಳುವುದಾಗಿದೆ. ಆದರೆ ಅದು ಈಗ ಅನುಷ್ಠಾನಗೊಳ್ಳಬೇಕು ಎಂದು ಬದಲಾವಣೆ ಪರ, ಸಮಾನತೆಯ ಪರ ಶ್ರಮಿಸಿದರು ಎಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಇಂಡಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಹರಳಯ್ಯ, ಬೆರಗು ಪ್ರಕಾಶನ ಸಂಚಾಲಕ ಡಾ. ರಮೇಶ ಕತ್ತಿ, ಸತ್ಯ ಸಾಯಿ ಜಿಲ್ಲಾ ಮಹಿಳಾ ಸೇವಾ ಸಂಚಾಲಕರು ಗಂಗಾಬಾಯಿ ಗಲಗಲಿ, ಎಸ್.ಜಿ. ವಾಲಿ, ಪ್ರಾಚಾರ್ಯ ಎಸ್.ಬಿ. ಜಾಧವ ಮತ್ತಿತರಿದ್ದರು.

ಸಿದ್ಧೇಶ್ವರ ಶ್ರೀಗಳಿಗೆ ಕಾವ್ಯ ಹಾಗೂ ಗೀತ ನಮನದಲ್ಲಿ ಮಹಿಬೂಬ ಜಿದ್ದಿ, ಆರ್.ಬಿ. ತಳವಾರ, ಸಂಗಮೇಶ ಕರೆಪ್ಪಗೋಳ, ಐಶ್ವರ್ಯ ಕುಂಬಾರ, ರಾಘವೇಂದ್ರ ದೇಶಪಾಂಡೆ, ಶರಣಬಸವರಾಜ ಪಾಟೀಲ, ಪಾರ್ವತಿ ಸೊನ್ನದ, ದಾನಮ್ಮ ಹಿರೆಪಟ್ಟ, ರವಿ ಮುಂದೆವಾಡಿ, ನಿರ್ಮಲಾ ಹಂಜಗಿ, ಸರೋಜಿನಿ ಮಾವಿನಮರ, ಶೀಲಾ ಡಂಗಿ, ವಿ.ಎಸ್. ದಸ್ತರೆಡ್ಡಿ, ರೇಣುಕಾ ಸಂಖ, ಆರ್.ಎಸ್. ಮಾರನೂರ, ಜಿ.ಡಿ. ಕಾಂಬಳೆ, ರಾಜಶ್ರೀ ಕ್ಷತ್ರಿ, ಸುಮಂಗಲಾ ನಿಂಬಾಳ, ಶೋಭಾ ಬಡಿಗೇರ, ಮರಿಲಿಂಗಪ್ಪ ಹೊರಗಿನಮನಿ, ಬಾಬು ಸಿಂಪಿ, ಬಸವರಾಜ ಕಿರಣಗಿ, ಕಾವ್ಯ ಮತ್ತು ಗೀತ ವಚನ ಮಾಡಿದರು.
ವೈ.ಬಿ. ಪಾಟೀಲ ಸ್ವಾಗತಿಸಿದರು. ಐ.ಎಸ್. ಮಾಶ್ಯಾಳ ನಿರೂಪಿಸಿದರು.