ಹುಬ್ಬಳ್ಳಿ: ಇಲ್ಲಿನ ಗೋಕುಲದ ರೇವಡಿಹಾಳ ರಸ್ತೆಯ ಬಸವಂತಪ್ಪ ಬ. ಹೊಸಮನಿ ಹಾಗೂ ಹೊಸಮನಿ ಬಂಧುಗಳ ಜಮೀನಿನಲ್ಲಿ ಮಾ. 1ರಿಂದ 31ರವರೆಗೆ ಬೆಳಗ್ಗೆ 6.30ರಿಂದ 7.30ರವರೆಗೆ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಏರ್ಪಾಟಾಗಿದೆ.
ಈ ಹಿನ್ನೆಲೆಯಲ್ಲಿ ಗೋಕುಲ ಮೈಲಾರ ಲಿಂಗೇಶ್ವರ ನಗರದ ಚಂದ್ರಕಾಂತ ಬೆಲ್ಲದ ಸಮುದಾಯ ಭವನದಲ್ಲಿ ಶನಿವಾರ ಸಿದ್ಧೇಶ್ವರ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯಿಂದ ಪೂರ್ವಭಾವಿ ಸಭೆ ನಡೆಯಿತು. ಶ್ರೀ ಮಲ್ಲಯ್ಯ ಸ್ವಾಮಿಗಳು ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿದರು. ಗೋಕುಲ, ರೇವಡಿಹಾಳ, ಗಾಮನಗಟ್ಟಿ, ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ದಾನಿಗಳು, ಗಣ್ಯರು, ಮಹಿಳೆಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಭಿತ್ತಿಪತ್ರಗಳ್ನು ಬಿಡುಗಡೆಗೊಳಿಸಲಾಯಿತು.
ಶ್ರೀ ಬಸವರಾಜ ಸ್ವಾಮಿಗಳು, ಶಾಸಕ ಅರವಿಂದ ಬೆಲ್ಲದ, ಪ್ರಮುಖರಾದ ರಾಜಣ್ಣ ಕೊರವಿ, ಮಹೇಶ ದ್ಯಾವಪ್ಪನವರ, ವಳಸಂಗ, ಬಸವರಾಜ ನಾಯ್ಕರ, ರಾಮಣ್ಣ ಬಿಡಗೇರ, ವಿಶ್ವನಾಥ ಸೋಮಾಪುರ, ಮಹಾದೇವಪ್ಪ ಪೂಜಾರ, ಶಂಭು ಆರೇರ, ಇತರರಿದ್ದರು. ಪ್ರವಚನದ ಏರ್ಪಾಟಿಗಾಗಿ ವಿವಿಧ ಸಮಿತಿ ರಚಿಸಲಾಯಿತು.