ಜಿಲ್ಲೆ

ಸಿದ್ಧಾರೂಢ ಮಠ ಜಲರಥೋತ್ಸವ 13ರಂದು

ಹುಬ್ಬಳ್ಳಿ: ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠದ ಜಲ ರಥೋತ್ಸವ (ತೆಪ್ಪದ ತೇರು) ಆ. 13ರಂದು ಸಂಜೆ 5.30ಕ್ಕೆ ಜರುಗಲಿದೆ.

ಸದ್ಗುರು ಶ್ರೀ ಸಿದ್ಧಾರೂಢರ 93ನೇ ಪುಣ್ಯಾರಾಧನೆ ಕಾರ್ಯಕ್ರಮವು ಆ. 7ರಿಂದ ಆರಂಭಗೊಳ್ಳಲಿದ್ದು 13ರಂದು ಜಲ ರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ. ನಿತ್ಯ ಶ್ರೀಮಠದ ಕೈಲಾಸ ಮಂಟಪದಲ್ಲಿ ಬೆಳಗ್ಗೆ 7.45ಕ್ಕೆ ಪುರಾಣ ಪಠಣ, 9.30ಕ್ಕೆ ಪ್ರವಚನ, ಸಂಜೆ 5 ಗಂಟೆಗೆ ಕೀರ್ತನೆ ಹಾಗೂ ರಾತ್ರಿ ಮಹಾಪೂಜೆ ಜರುಗಲಿದೆ.

ಶ್ರೀ ಸಿದ್ಧಾರೂಢ ಸ್ವಾಮೀಜಿ ಜಲ ರಥೋತ್ಸವವು ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಗೋವಾ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ.