ಜಿಲ್ಲೆ

ಸಿದ್ಧವೃಷಭೇಂದ್ರ ಶ್ರೀ ಕರ್ತೃ ಗದ್ದುಗೆ ಪುನಶ್ಚೇತನ ಮಹತ್ಕಾರ್ಯ

Shivamogga

ಸೊರಬ: ಕೆಳದಿ ಅರಸರ ಕಾಲದಲ್ಲಿ ನಿರ್ವಿುಸಿದ ಜಡೆ ಮಠದ ಸಿದ್ಧವೃಷಭೇಂದ್ರ ಸ್ವಾಮೀಜಿ ಕರ್ತೃ ಗದ್ದುಗೆ ಪುನಶ್ಚೇತನ ಮಾಡುತ್ತಿರುವುದು ಮಹತ್ಕಾರ್ಯ ಎಂದು ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಭಾನುವಾರ ಸಿದ್ಧವೃಷಭೇಂದ್ರ ಸ್ವಾಮೀಜಿ ಗದ್ದುಗೆ ಮರುನಿರ್ವಣ ಕಾರ್ಯದಲ್ಲಿ ಕರ್ತೃ ಗದ್ದುಗೆ ಬಗ್ಗೆ ಮಾಹಿತಿ ನೀಡಿದ ಅವರು, 12 ಶತಮಾನದಲ್ಲಿ ಬಸವಣ್ಣ ಅವರು ಧಾರ್ವಿುಕ ಆಚರಣೆಗಳ ಮೂಲಕ ಸಮಾಜ ಸುಧಾರಣೆಗೆ ಮುಂದಾಗಿದ್ದರು ಎಂದರು.

ಸ್ವಾತಂತ್ರ್ಯೂರ್ವದಲ್ಲಿ ಕ್ರೖೆಸ್ತ ಮಿಷನರಿಗಳು ಶಿಕ್ಷಣ ಹಾಗೂ ಆರೋಗ್ಯ ಸೇವೆ ನೀಡುವ ನೆಪದಲ್ಲಿ ಮತಾಂತರಕ್ಕೆ ಯತ್ನಿಸಿದ್ದವು. ಈ ವೇಳೆ ಮಠಗಳು ಎಚ್ಚೆತ್ತುಕೊಂಡು ಧಾರ್ವಿುಕತೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ಇಂದಿಗೂ ಪರಂಪರೆ ಉಳಿದಿದೆ. ಸಮಾಜದ ಪೂರಕ ಕಾರ್ಯಕ್ರಮಗಳಿಗೆ ಸರ್ಕಾರದ ಜತೆ ಭಕ್ತರು ಕೈಜೋಡಿಸಿದರೆ ಉನ್ನತಿ ಸಾಧ್ಯ ಎಂದು ಹೇಳಿದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಮ್ಮ ತಾಯಿ ಮೈತ್ರಾದೇವಿ ಹೆಸರಿನಲ್ಲಿ 5 ಲಕ್ಷ ರೂ. ದೇಣಿಗೆ ನೀಡಿದರು. ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕವಲೇದುರ್ಗದ ಡಾ. ಶ್ರೀ ಸಿದ್ದಲಿಂಗ ಸ್ವಾಮೀಜಿ, ಗುತ್ತಲ ಶ್ರೀ ಪ್ರಭು ಸ್ವಾಮೀಜಿ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಅರಣ್ಯ ಸಮಿತಿ ರಾಜ್ಯ ಉಪಾಧ್ಯಕ್ಷ ರೇವಣಪ್ಪ, ಇತಿಹಾಸ ಸಂಶೋಧಕ ಡಾ. ಜಗದೀಶ್, ಜಯದೇವಪ್ಪ, ಜಿಪಂ ಸದಸ್ಯ ಶಿವಲಿಂಗ ಗೌಡ, ನಾಗಪ್ಪ, ಜಯದೇವಪ್ಪ, ಸತೀಶ್, ರುದ್ರಮುನಿ, ಸಿ.ವಿ.ಶೆಟ್ರು, ನೀಲಕಂಠ ಗೌಡ, ಇಂದೂಧರ್ ಒಡೆಯರ್, ಎ.ಎಲ್.ಅರವಿಂದ್, ಗುರುಪ್ರಸನ್ನ ಗೌಡ ಇದ್ದರು.

ಜಡೆ ಸಂಸ್ಥಾನ ಮಠದ ಅಭಿವೃದ್ಧಿಗೆ ಶ್ರೀ ಮಹಾಂತ ಸ್ವಾಮೀಜಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಮಠಗಳ ಉಳಿವಿಗೆ ರಾಜಾಶ್ರಯ ಹಾಗೂ ಜನಾಶ್ರಯ ಮುಖ್ಯ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರೋತ್ಸಾಹಿಸಿದ ಫಲವಾಗಿ ಮಠಗಳ ಕಾರ್ಯಕ್ಷೇತ್ರ ವಿಸ್ತಾರವಾಗಿದೆ.

| ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಕ್ಕಿನ ಕಲ್ಮಠ, ಶಿವಮೊಗ್ಗ

ಕೆಳದಿ ಅರಸರ ಕಾಲದ ಜಡೆ ಸಂಸ್ಥಾನ ಮಠದ ಹಿರಿಯ ಗುರುಗಳ ನೂತನ ಗದ್ದುಗೆ ನಿರ್ವಿುಸಲು ಸರ್ಕಾರದಿಂದಲೂ ಸಹಕಾರ ನೀಡಲಾಗಿದೆ. ಕರೊನಾ ಸಂಕಷ್ಟದಲ್ಲಿ ಸಮಾಜದವರ ಸಹಕಾರ ಹಾಗೂ ಧರ್ವಚರಣೆಯಿಂದ ಸಂಸ್ಕಾರದ ಚೌಕಟ್ಟಿನಲ್ಲಿ ಬದುಕಲು ಸಾಧ್ಯ.

| ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ