ಜಿಲ್ಲೆ

ಸಿದ್ಧ ಶಿವಯೋಗಿಗಳ ಪುಣ್ಯಸ್ಮರಣೆ ಇಂದು

ಅರಳಗುಂಡಗಿ: ಶ್ರೀ ಮಡಿವಾಳೇಶ್ವರ ವೈದ್ಯ ಬ್ರಹನ್ಮಠದಲ್ಲಿ ಉತ್ತರಾಧಿಕಾರಿ ಶ್ರೀ ರಘುನಂದ ಶಾಸ್ತಿçಗಳ ಅಧ್ಯಕ್ಷತೆಯಲ್ಲಿ ಶ್ರೀ ಸಿದ್ಧ ಶಿವಯೋಗಿಗಳ ದ್ವಿತೀಯ ಪುಣ್ಯಾರಾಧನೆ ಹಾಗೂ ಧರ್ಮಸಭೆ ಕಾರ್ಯಕ್ರಮ ಗುರುವಾರ ಮಧ್ಯಾಹ್ನ 12ಕ್ಕೆ ಜರುಗಲಿದೆ ಎಂದು ಶ್ರೀಮಠ ತಿಳಿಸಿದೆ.

ಕಡಕೋಳದ ಡಾ.ಶ್ರೀ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ, ಚಿಗರಳ್ಳಿಯ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಬಲವಂತ ಶರಣರು, ಬಿದನೂರಿನ ಶ್ರೀ ಯಮುನಯ್ಯ ಮುತ್ಯಾ ನೇತೃತ್ವ ವಹಿಸುವರು.

ಮುದ್ದಡಗಾದ ಶ್ರೀ ಸದ್ಯೋಜಾತ ರೇಣುಕಾ ಶಿವಾಚಾರ್ಯರು, ಮುದ್ದೇಬಿಹಾಳದ ವೈದ್ಯ ಡಾ.ಲಾಲ್ ಲಿಂಗೇಶ್ವರ ಶರಣರು, ಕರಬಸಯ್ಯ ಸ್ಥಾವರಮಠ, ಬಸವರಾಜಗೌಡ ಮಾಲಿಪಾಟೀಲ್, ಶರಣಗೌಡ ಹಿರೇಗೌಡರ, ಮಹೆಬೂಬ್ ಮನಿಯಾರ್ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 35 ಸಾಧಕರಿಗೆ ವೈದ್ಯರತ್ನ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶ್ರೀಮಠ ಪ್ರಕಟಣೆಯಲ್ಲಿ ಕೋರಿದೆ.