ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ತೆರೆ ಬಿದ್ದಿದ್ದು ಅಧ್ಯಕ್ಷ ರಾಗಿ ಪ್ರಕಾಶ ಬಗಲಿ ಹಾಗೂ ಉಪಾಧ್ಯಕ್ಷ ರಾಗಿ ಬೌರಮ್ಮ ಗೊಬ್ಬೂರ ಆಯ್ಕೆಯಾಗಿದ್ದಾರೆ.
ಒಟ್ಟು 19 ಸ್ಥಾನಗಳ ನಿರ್ದೇಶಕ ಮಂಡಳಿಗೆ ನ.8 ರಂದು ಮತದಾನ ಪ್ರಕ್ರಿಯೆ ನಡೆದಿತ್ತು. ಅಂದುಕೊಂಡಂತೆ ಹಳೇ ಪ್ಯಾನಲ್ ಮೇಲುಗೈ ಸಾಧಿಸಿತ್ತು. ಇದೀಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ನಿರೀಕ್ಷೆಯಂತೆ ಪ್ರಕಾಶ ಬಗಲಿ ಅಧ್ಯಕ್ಷರಾಗಿ, ಗೌರಮ್ಮ ಗೊಬ್ಬೂರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಪಿ.ಬಿ. ಕಾಳಗಿ ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಉಪಾಧ್ಯಕ್ಷ ರನ್ನು ಚುನಾವಣೆ ಅಧಿಕಾರಿ ಹಾಗೂ ನಿರ್ದೇಶಕ ಮಂಡಳಿ ಹೂ ಮಾಲೆ ಹಾಕಿ ಅಭಿನಂದಿಸಿತು. ಬಳಿಕ ಅಧ್ಯಕ್ಷ- ಉಪಾಧ್ಯಕ್ಷ ರು ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನಾಶೀರ್ವಾದ ಪಡೆದರು.