ಜಿಲ್ಲೆ

ಸಿದ್ದು ಸರ್ಕಾರ ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಚಿತ್ರದುರ್ಗ: ವೀರಶೈವ-ಲಿಂಗಾಯುತ ವಿರೋಧಿಯಾಗಿ ವರ್ತಿಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರವನ್ನು ವಜಾಕ್ಕೆ ಒತ್ತಾಯಿಸಿ ಜಿ ಲ್ಲಾ ವೀರಶೈವ ಲಿಂಗಾಯುತ ಒಳ ಪಂಗಡಗಳ ಒಕ್ಕೂಟ, ಜಿಲ್ಲಾ ಪಂಚಮಸಾಲಿ ಸಮಾಜ ಹಾಗೂ ವೀರಶೈವಲಿಂಗಾಯತ ಯುವ ಪಡೆ ಯ ನೇತೃತ್ವದಲ್ಲ್ಲಿ ನಗರದ ಡಿಸಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪ್ರವರ್ಗ 2-ಎ ಮೀಸಲಿಗಾಗಿ ಬೆಳಗಾವಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ಲಾಠಿಜಾರ್ಜ್ ಮಾಡಿದ್ದಾರೆ. ಅಧಿವೇಶನದಲ್ಲಿ ಮನವಿ ಸಲ್ಲಿಸಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದರೂ ಸಿಎಂ,ಪೊಲೀಸರನ್ನು ಬಳಸಿ ಕೊಂಡು ಪ್ರತಿಭಟನಾ ನಿರತರ ಮೇಲೆ ಲಾಠಿಜಾರ್ಜ್ ಮಾಡಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಿ ದ್ದಾರೆ.

ಪ್ರತಿಭಟನಾನಿರತ ನೂರಾರು ಜನರಿಗೆ ತೀವ್ರವಾಗಿ ಗಾಯಗಳಾಗಿವೆ,ಹಲವರ ಕೈ ಕಾಲುಗಳು ಮುರಿದಿವೆ ಹಾಗೂ ಪ್ರತಿಭಟನಾನಿರತ ರ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯುತ ಸಮುದಾಯದ ಮೇಲೆ ಪದೆ ಪದೇ ದೌರ್ಜನ್ಯವೆಸಗುತ್ತಿದೆ.ಈ ಹಿಂದೆ ನಮ್ಮ ಸಮಾಜ ಒಡೆಯಲು ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯುತ ಧರ್ಮದ ಹೋರಾಟವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ವೀರಶೈವ ಲಿಂಗಾಯುತ ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುವ,ಪ್ರತಿಭಟನಾಕಾರರ ಮೇಲೆ ದೌರ್ಜನ್ಯವೆಸಗಿ ಸಂವಿಧಾನ ವಿರೋಧಿಯಾಗಿ ವರ್ತಿಸಿರುವ ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸಿ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಜೀತೇಂದ್ರ ಹುಲಿಕುಂಟೆ, ವಿಎಚ್‌ಪಿಯ ಪಿ.ರುದ್ರೇಶ್,ತಿಪ್ಪೇಶ್‌ಗಾರೇಹಟ್ಟಿ,ಎಚ್.ಎಂ.ಮಂಜುನಾಥ್,ವೀರೇಶ್,ಸಂಜಯ್‌ಜಾಲಿಕ ಟ್ಟೆ, ಗುರುರಾಜ್,ಅಭಿಲಾಷ್,ದೀಲಿಪ್,ಮಲ್ಲಿಕಾರ್ಜುನ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.