ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ವಿರುದ್ಧ ವಿನಾ ಕಾರಣ ಆರೋಪಗಳನ್ನು ಹೊರೆಸಿದ್ದ ಪ್ರತಿಪಕ್ಷಗಳ ನಡೆ ವಿರುದ್ಧ ಜನಾಕ್ರೋಶ ಹೊರಬಿದ್ದಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವನ್ನು ವಿಶ್ಲೇಷಿ ಸಿದ್ದಾರೆ.
ಎಲ್ಲ ಸಮುದಾಯದ ಹಿತಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಸಿದ್ದರಾಮಯ್ಯರ ಕೆಣಕುವ ಪ್ರಯತ್ನ ನಡೆಸಿದ್ದ ಪ್ರತಿ ಪಕ್ಷಗಳು ಮಂಗಳಾರತಿ ಮಾಡಿಸಿಕೊಂಡಿವೆ, ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಈ ಗೆಲುವು ಸಿದ್ದರಾಮಯ್ಯ ನಾಯಕತ್ವದ ಕಿರೀಟಕ್ಕೆ ಮತ್ತೊಂ ದು ಗರಿ. ಅವರು ಸಿಎಂ ಆಗಿ ಎರಡನೇ ಅವಧಿ ಪೂರ್ಣಗೊಳಿಸುವುದಕ್ಕೆ ಮುಡಾ,ವಕ್ಫ್,ಬಿಪಿಎಲ್ ಕಾರ್ಡ್ ಹೆಸರಲ್ಲಿ ಅಡ್ಡಿಪಡಿಸಲು ಮುಂದಾದ ಪ್ರತಿಪಕ್ಷಗಳ ಷಡ್ಯಂತ್ರ ಸಹಿಸಲಾಗದೆಂದು ಮತದಾರರು ಸಂದೇಶ ನೀಡಿದ್ದಾರೆ.
ರಾಜ್ಯದಲ್ಲಿ ಅಹಿಂದ ಮತಗಳು ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಂತುಕೊಂಡಿವೆ. ವೀರಶೈವ-ಲಿಂಗಾಯತ, ಒಕ್ಕಲಿಗ ಮತಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ. ಈ ಗೆಲುವು ಬಿಬಿಎಂಪಿ,ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಮುಂದುವರಿ ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರವ ಅಂಜನೇಯ, ಷಡ್ಯಂತ್ರ ಕೈ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಪ್ರತಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.