ಚಿತ್ರದುರ್ಗ: ಅಡಕೆ ಖರೀದಿಸಿದ್ದ ಹಣ ಕೊಡದೆ ಸತಾಯಿಸುತ್ತಿದ್ದ ವರ್ತಕನ ನಡೆಯಿಂದ ನೊಂದ ಸಿದ್ದಾಪುರದ ಅಡಕೆ ವ್ಯಾಪಾರಿ ಶೈಲೇಶ್‌ಕುಮಾ ರ್(41)ಬುಧವಾರ ಸಂಜೆ ಗ್ರಾಮದ ತಮ್ಮ ಅಡಕೆ ಗೋದಾಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10-11 ವ ರ್ಷಗಳಿಂದ ರೈತರು ಹಾಗೂ ಇತರೆಯವರಿಂದ ಅಡಕೆ ಖರೀದಿಸಿ ಮಾರಾಟ ಮಾಡುತ್ತಿದ್ದ ಶೈಲೇಶ್‌ಕುಮಾರ್,ಚಿತ್ರದುರ್ಗ ಕೆಳಗೋಟೆ ಇಂಡಸ್ಟೀಯಲ್ ಏರಿಯಾದಲ್ಲಿರುವ ಶ್ರೀ ಕೆಂದಗಣೇಶ್ವರ ಸ್ವಾಮಿ ಟ್ರೇಡರ್ಸ್ ಮಾಲೀಕ,ಅಡಕೆ ವರ್ತಕ ಉದಯ್‌ಶೆಟ್ಟಿಗೆ ಅಡಕೆಯನ್ನು ಮಾರಿದ್ದರು.
ಇವರಿಬ್ಬರ ನಡುವೆ ಮೊದಲಿಂದ ವಹಿವಾಟು ಇತ್ತು. ಅಡಕೆ ಮಾರಿದ್ದ ಮೊತ್ತ 6.60 ಕೋಟಿ ರೂ.ಕೊಡುವಂತೆ ಉದಯ್‌ಶೆಟ್ಟಿಗೆ ಶೈ ಲೇಶ್‌ಕುಮಾರ್ ಕೇಳುತ್ತಿದ್ದರು. ಅಡಕೆ ಮಾರಿದ್ದ ರೈತರೂ ಹಣ ಕೊಡುವಂತೆ ಶೈಲೇಶ್‌ಕುಮಾರ್‌ನನ್ನು ಪೀಡಿಸುತ್ತಿದ್ದರು. ಪದೆ ಪದೇ ಕೇ ಳುತ್ತಿದ್ದರೂ ಹಣ ಕೊಡದೆ ಸತಾಯಿಸುತ್ತಿದ್ದಲ್ಲದೆ,ಅವಾಚ್ಯವಾಗಿ ತನ್ನನ್ನು ನಿಂದಿಸಿದ್ದರಿಂದಾಗಿ ನೊಂದಿದ್ದ ಶೈಲೇಶ್‌ಕುಮಾರ್,ತನ್ನ ಸಾವಿಗೆ ಉದಯ್ ಶೆಟ್ಟಿ ಕಾರಣವೆಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿ ರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯ್‌ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪಿಐ ಮುದ್ದುರಾಜ್ ತನಿಖೆ ಮುಂದುವರಿಸಿದ್ದಾರೆ.