ಜಿಲ್ಲೆ

ಸಿದ್ದಾಪುರ ಸಮೀಪದ ಜಲಪಾತದಲ್ಲಿ ಮುಳುಗಿದ ಕೋಲಾರದ ವ್ಯಕ್ತಿ

ಸಿದ್ದಾಪುರ(ಉತ್ತರ ಕನ್ನಡ): ತಾಲೂಕಿನ ತಂಡಾಗುಂಡಿ‌ ಗ್ರಾಪಂ‌ ವ್ಯಾಪ್ತಿಯ ಹುಕ್ಕಳಿ ಗ್ರಾಮದ ಹುಂಡಿಗದ್ದೆ ಜಲಪಾತ ವೀಕ್ಷಣೆಗೆ ತೆರಳಿದ‌ ವ್ಯಕ್ತಿಯೊಬ್ಬ ನೀರಿನಲ್ಲಿ‌ ಬಿದ್ದು‌ ನಾಪತ್ತೆಯಾದ ಘಟನೆ ಶನಿವಾರ ನಡೆದಿದೆ.
ಏರ್ಟೆಲ್‌ ಕಂಪನಿಯ ಉದ್ಯೋಗಿ ಕೋಲಾರ ಜಿಲ್ಲೆಯ ಮದುವತ್ತಿ‌ ಗ್ರಾಮದ ರಾಘವೇಂದ್ರ ವೆಂಕಟೇಶ ಗೌಡ(32) ನಾಪತ್ತೆಯಾದ ವ್ಯಕ್ತಿ.
ಸ್ಥಳೀಯರು ಜಾಲತಾಣದಲ್ಲಿ ಹಾಕಿದ ಮಾಹಿತಿ ಆಧರಿಸಿ
ಮೈಸೂರು, ಬೆಂಗಳೂರು, ಕೋಲಾರ ಸೇರಿ‌ ವಿವಿಧ ಊರುಗಳ 14 ಸ್ನೇಹಿತರು ಗುಂಡಿಗದ್ದೆ ಜಲಪಾತಕ್ಕೆ ಆಗಮಿಸಿದ್ದರು.
ಸ್ಥಳೀರೊಬ್ಬರ ಜತೆ ಜಲಪಾತ ವೀಕ್ಷಣೆಗೆ ತೆರಳಿದ್ದಾಗ ಘಟನೆ ನಡೆದಿದೆ. ಸಿದ್ದಾಪುರ‌ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.