ಕೆ.ಆರ್.ನಗರ: ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಂಚುಗಾರ ಕೊಪ್ಪಲಿನ ರಾಜಮ್ಮ ಕೃಷ್ಣಯ್ಯ ಅವಿರೋಧವಾಗಿ ಆಯ್ಕೆಯಾದರು.
ಆಂತರಿಕ ಒಪ್ಪಂದದಂತೆ ಉಪಾಧ್ಯಕ್ಷರಾಗಿದ್ದ ಸರ್ವಮಂಗಳಾ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯಲ್ಲಿ ರಾಜಮ್ಮ ಕೃಷ್ಣಯ್ಯ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆ ಎಇಇ ವಿಜಯಕುಮಾರ್ ಕಾರ್ಯ ನಿರ್ವಹಿಸಿದರು. ಅಧ್ಯಕ್ಷ ತ್ಯಾಗರಾಜ್, ಸದಸ್ಯರಾದ ಗೋವಿಂದಯ್ಯ, ಸರ್ವಮಂಗಳಾ, ಕೆ.ಎಸ್. ರಂಗೇಶ್ ಕುಮಾರ್, ಕೆ.ಎಂ. ಶ್ರುತಿ, ಟಿ. ಮೋಹನ್‌ಕುಮಾರ್, ಕೆ.ಬಿ. ಮಾದೇಗೌಡ, ಮಹಾದೇವ, ಎಸ್.ಕೆ. ಅಭಿಲಾಷ್, ಎಚ್.ಎನ್. ಉಮಾ, ಸುಕನ್ಯಾ, ವಿಜಯಲಕ್ಷ್ಮೀ, ಆರ್.ರಂಜಿನಿ, ಪಿಡಿಒ ಶಿವಕುಮಾರ್, ಬಿಲ್ ಕಲೆಕ್ಟರ್ ರಮೇಶ್ ಇತರರು ಇದ್ದರು.