ಅರಕಲಗೂಡು: 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸಂಚರಿಸುತ್ತಿರುವ ಜ್ಯೋತಿ ರಥಕ್ಕೆ ತಾಲೂಕಿನ ಸಿದ್ದಾಪುರ ಗೇಟ್‌ನಲ್ಲಿ ಮಂಗಳವಾರ ಸಂಭ್ರಮದ ಸ್ವಾಗತ ಕೋರಲಾಯಿತು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಆಡಳಿತ, ತಾಲೂಕು ಸಾಹಿತ್ಯ ಪರಿಷತ್ತು ಹಾಗೂ ಕನ್ನಡಾಭಿಮಾನಿಗಳು ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಬರಮಾಡಿಕೊಂಡರು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶ್‌ಗೌಡ ಮಾತನಾಡಿ, ಈ ಬಾರಿ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಈ ಸಂಬಂಧ ರಾಜ್ಯಾದ್ಯಂತ ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆ, ದೇಶದ ಬೆನ್ನೆಲುಬು ರೈತ ನೇಗಿಲುನೊಂದಿಗೆ ಉಳುಮೆ ಮಾಡುವ ಮಾದರಿಯಲ್ಲಿ ಕನ್ನಡ ಜ್ಯೋತಿರಥ ಹೊತ್ತು ಸಮ್ಮೇಳನ ಪ್ರಚಾರ ಮಾಡಲಾಗುತ್ತಿದೆ. ನೆರೆಯ ಜಿಲ್ಲೆ ಮಂಡ್ಯದಲ್ಲಿ ಸಮ್ಮೇಳನ ಜರುಗುತ್ತದೆ ಎಲ್ಲ ಕನ್ನಡ ಅಭಿಮಾನಿಗಳು ಸಮ್ಮೇಳನಕ್ಕೆ ಆಗಮಿಸಿ ಯಶಸ್ವಿಯಾಗಿಸಬೇಕು ಎಂದು ಮನವಿ ಮಾಡಿದರು.