ರಕ್ಷಿತಾ ಭರತಕುಮಾರ ಈಟಿ 
ಜಿಲ್ಲೆ

ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ರಣ‌ಹೇಡಿ ತಂತ್ರ

ಬಾಗಲಕೋಟೆ: ಸಿಎಂ ಶ್ರೀ ಸಿದ್ದರಾಮಯ್ಯನವರು ಕಪ್ಪು ಚುಕ್ಕೆ ಇಲ್ಲದೆ, ಸತ್ಯ ಪ್ರಮಾಣಿಕತೆ ಮೇಲೆ ಆಡಳಿತ‌ ನಡೆಸಿದ ಧಿಮಂತ ನಾಯಕ.‌ ಚುನಾವಣೆಯಲ್ಲಿ ಅವರ ಮಣಿಸಲು ಸಾಧ್ಯವಾಗದೇ ಬಿಜೆಪಿ ಇದೀಗ ರಣಹೇಡಿತನ ಮಾಡಲು ಮುಂದಾಗಿದ್ದು , ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ತಿಳಿಸಿದ್ದಾರೆ. ‌

ಈ ಕುರಿತು ಪ್ರಕಟನೆ ನೀಡಿರುವ ಅವರು, ಬಿಜೆಪಿ ತನ್ನ ಮನಬದ್ದಂತೆ ರಾಜ್ಯಪಾಲರ ಆಡಳಿತದ ಮೇಲೆ ಪ್ರಹಾರ ನಡೆಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ಡಿಸಿಎಂ ಶ್ರೀ ಡಿ.ಕೆ.ಶಿವಕುಮಾರ ಅವರ ಮೇಲೆ ಇಡಿ, ಐಟಿ ಅಂತಹ ದಾಳಿ ನಡೆಸಿ ಸುಪ್ರೀಂಕೋರ್ಟ್ ಎದುರು ಮಂಡಿಯೂರಿತು. ಇದೀಗ ಸಿಎಂ ಶ್ರೀ ಸಿದ್ದರಾಮಯ್ಯ ಮೇಲೆ ಗುರಿಯಾಗಿಸಿ ಅಧಿಕಾರವನ್ನು ಚಲಾಯಿಸಲು ಮುಂದಾಗಿದೆ. ಕಾಂಗ್ರೆಸ್ 136 ಶಾಸಕರು, ಕಾರ್ಯಕರ್ತರು, ಕೋಟ್ಯಂತರ ಅಭಿಮಾನಿಗಳು ಅಹಿಂದ ನಾಯಕನ ಬೆನ್ನಿಗೆ ನಿಂತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಶ್ರೀ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು. ಕೂಡಲೇ ರಾಜ್ಯಪಾಲರು ಆದೇಶ ಹಿಂಪಡೆಯಬೇಕು. ಕೇಂದ್ರ ಸರ್ಕಾರ ‌ಕೈಗೊಂಬೆಯಂತೆ‌ ವರ್ತಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.