ಜಿಲ್ಲೆ

ಸಿದ್ದರಾಮಯ್ಯಗೆ ಹಿಂದುಗಳೆAದರೆ ಅಲರ್ಜಿ

ಹರೀಶ ಕುಲಕರ್ಣಿ

ಶಹಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿಂದೂಗಳೆAದರೆ ಅಲರ್ಜಿ. ಮುಸ್ಲಿಮರೆಂದರೆ ತುಂಬಾ ಅಕ್ಕರೆ ಎಂದು ಮಾಜಿ ಸಂಸದ ಪ್ರತಾಪಸಿಂಹ ಕಿಡಿಕಾರಿದರು.

ಪಟ್ಟಣದಲ್ಲಿ ಹಿಂದು ಮಹಾಗಣಪತಿ ವಿರ್ಸಜನೆ ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಮತ ಪಡೆಯಲು ಅವರನ್ನು ಪ್ರೀತಿಸಲಿ.ಆದರೆ, ಇವರು ಹಾಗಲ್ಲ , ಸದಾ ಅವರ ಏಳಿಗೆಯನ್ನೇ ಬಯಸುತ್ತಾರೆ ಮತ್ತು ಹಿಂದೂಗಳನ್ನು ತುಚ್ಛ ಭಾವನೆಯಿಂದ ಕಾಣುತ್ತಾರೆ ಎಂದು ಆರೋಪಿಸಿದರು.

ನಾಗಮಂಗಲ ಗಲಭೆ ಗಮನಿಸಿದರೆ ಈ ಸರ್ಕಾರಕ್ಕೆ ಗಣೇಶ ಹಬ್ಬ ಆಚರಣೆ ಇಷ್ಟವಿಲ್ಲ ಎಂಬುವುದು ಗೊತ್ತಾಗುತ್ತದೆ. ಹಿಂದುಳಿದವರ ಬಗ್ಗೆ ಕೇವಲ ಭಾಷಣ ಮಾಡುವ ಸಿಎಂ, ಅವರನ್ನು ಬೆಳೆಯಲು ಬಿಟ್ಟಿಲ್ಲ, ಅವರಿಗಾಗಿ ಏನ್ನನ್ನು ಮಾಡಿಲ್ಲ ಎಂದು ದೂರಿದರು. ಸಮಾಜ ಮತ್ತು ಧರ್ಮ ಒಡೆಯುವ ಕೆಲಸ ಮಾಡುತ್ತಿರುವ ಕೋಮುವಾದಿಗಳಿಗೆ ತಕ್ಕ ಪಾಠ ಕಲಿಸಲು ಎಲ್ಲರು ಸಿದ್ದರಿರಬೇಕು. ಗಣೇಶ ಹಬ್ಬ ಹಿಂದೇ ಆಚರಿಸುವ ರೀತಿಯಲ್ಲಿಯೇ ವೈಭವದಿಂದ ಆಚರಿಸೋಣ ಎಂದರು.

ಆAಧ್ರಪ್ರದೇಶ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ,ಸನಾತನ ಧರ್ಮ ರಕ್ಷಣಾ ಬೋರ್ಡ್ ಸ್ಥಾಪಿಸಬೇಕು ಎಂದಿರುವುದಕ್ಕೆ ಬೆಂಬಲಿಸುತ್ತೇವೆ. ನಾಲ್ಕು ಜನರಿರುವ ಒಂದು ಹಳ್ಳಿಯಲ್ಲಿ ದೊಡ್ಡ ಚರ್ಚ ಕಟ್ಟುತ್ತಾರೆ. ನೂರಾರು ಜನರಿರುವ ಊರುಗಳಲ್ಲಿ ದೊಡ್ಡ ಮಸೀದಿಗಳಿವೆ. ಆದರೆ, ಬಹುಸಂಖ್ಯಾತ ಹಿಂದುಗಳಿರುವ ಊರುಗಳಲ್ಲಿ ದೇವಾಲಯ ಕಟ್ಟಬೇಕಾದರೆ ನೂರೆಂಟು ಅಡೆತಡೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪವನ್ ಕಲ್ಯಾಣ ಹೇಳಿದ್ದು ಸರಿಯಿದೆ ಎಂದು ಸಿಂಹ ಹೇಳಿದರು.

ಹಿಂದು ದೇವಸ್ಥಾನಗಳನ್ನು ಸರ್ಕಾರದ ಕಪಿಮುಷ್ಠಿಯಿಂದ ಹೊರತರಬೇಕು. ಹುಂಡಿ ನಮ್ಮದು, ಅಭಿವೃದ್ಧಿ ಬೇರೆಯವರದ್ದು ಆಗುತ್ತಿದೆ. ಅದನ್ನು ತಪ್ಪಿಸಲು ನಮ್ಮ ದೇವಸ್ಥಾನಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಜನರು ಹುಂಡಿಗೆ ಹಾಕುವ ಹಣ ಬಳಕೆಯಾಗಬೇಕು ಎಂದರು.
ಮುಖAಡರಾದ ಕರಣ ಸುಬೇದಾರ, ಡಾ.ಚಂದ್ರಶೇಖರ ಸುಬೇದಾರ, ಬಸವರಾಜ ವಿಭೂತಿಹಳ್ಳಿ,ರಾಜಶೇಖರ ನಗನೂರ ಮೊದಲಾದವರಿದ್ದರು.

ಸಿಎಂ ಕನಸಿನಲ್ಲಿ ಕೃಷ್ಣ ಬೈರೇಗೌಡ: ವೀರಾವೇಶದಿಂದ ಮಾತನಾಡುವ ಸಚಿವ ಕೃಷ್ಣ ಬೈರೇಗೌಡ ಅವರು, ಒಕ್ಕಲಿಗರ ಗೌಡರ ಕೋಟಾದಲ್ಲಿ ಸಿಎಂ ಆಗುತ್ತೇನೆ ಎಂಬ ಕನಸು ಕಾಣುತ್ತಿದ್ದರೆ, ಅದನ್ನು ಈಗಲೇ ಮರೆತು ಬಿಡಿ. ಮೊದಲು ಕೊಟ್ಟ ಖಾತೆಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿ. ಹಿಂದೆಯೂ ಏನು ಮಾಡಲಿಲ್ಲ, ಈಗಲೂ ಏನು ಮಾಡುತ್ತಿಲ್ಲ. ಬದಲಿಗೆ ಸಿದ್ದರಾಮಯ್ಯ ಇಳಿದರೆ ನಾನೇದರೂ ಸಿಎಂ ಆಗಬಹುದೆಂಬ ಹುಚ್ಚಾಸೆಯಿಂದ ಬಾಯಿಗೆ ಬಂದAತೆ ಮಾತನಾಡುತ್ತಿದ್ದಾರೆ ಎಂದು ಪ್ರತಾಪ ಸಿಂಹ ಲೇವಡಿ ಮಾಡಿದರು. ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಸಲಹೆ ನೀಡಿದರು.