ಜಿಲ್ಲೆ

ಸಿದ್ದರಾಮಯ್ಯಗೆ ಸೂಲಿಬೆಲೆ ಧನ್ಯವಾದ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸ್ವಾತಂತ್ರ್ಯಕ್ಕೆ ಪ್ರೇರಣೆ ನೀಡುವುದಕ್ಕಾಗಿ ಆರಂಭವಾದ ಗಣೇಶ ಉತ್ಸವದಲ್ಲಿ ಇತ್ತೀಚೆಗೆ ನೃತ್ಯ, ಸಿನೆಮಾ ಹಾಡು ಹಾಕಿ ಕುಣಿಯುತ್ತಿz್ದೆÃವು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಭಾಗದಲ್ಲಿ ಸಾವರ್ಕರ್ ಫೋಟೋ ಏಕೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಹಿಂದುಗಳಲ್ಲಿ ಹೊಸ ಸಂಚಲನ ಮೂಡಿಸಿದರು. ಲಕ್ಷಾಂತರ ಗಣೇಶ ಪೆಂಡಾಲ್‌ಗಳಲ್ಲಿ ಸಾರ್ವಕರ್ ಚಿತ್ರ ಅಳವಡಿಸಿದ್ದೇವೆ. ನಿಜವಾದ ತಿಲಕರ ಕನಸಿನ ಗಣೇಶ ಚೌತಿ ವಾಪಸ್ ಆಗಿದೆ. ಅದಕ್ಕೆ ಸಿದ್ದರಾಮಯ್ಯಗೆ ಥ್ಯಾಂಕ್ಸ್ ಹೇಳಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಕೋಟೆ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ ೨೧ ದಿನಗಳ ಹಿಂದೂ ಮಹಾಗಣಪತಿಯ ಸ್ಥಳದಲ್ಲಿ ಏರ್ಪಡಿಸಿದ್ದ ಸಾವಿರದ ಸಾವರ್ಕರ್ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ವಿಠೋಬಾ ಮಂದಿರಕ್ಕೆ, ರತ್ನಗಿರಿಯ ಪತೀತ ಪಾವನ ಮಂದಿರಕ್ಕೆ ದಲಿತರ ಪ್ರವೇಶಕ್ಕಾಗಿ ಮೇಲ್ಜಾತಿಯವರೊಂದಿಗೆ ನಿರಂತರ ವಾದವನ್ನು ಮಾಡಿ, ವಾದದಲ್ಲಿ ಎಲ್ಲರನ್ನು ಸೋಲಿಸಿ, ಅಸ್ಪÊಷ್ಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡಿಸಿ, ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದ್ದು ವೀರ ಸಾವರ್ಕರ್ ಎಂದು ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪತೀತ ಪಾವನ ಮಂದಿರಕ್ಕೆ ಮಹಾರ ಜಾತಿಯ ಹುಡುಗನಿಗೆ ಪೂಜಾರಿಯನ್ನಾಗಿ ಮಾಡಿದ್ದರು. ದಲಿತ ಹುಡುಗಿಗೆ ಗೌರವ ಸಲ್ಲಿಸಿದ್ದರು. ಎಲ್ಲ ಜಾತಿಯ ಕೆಲಸಗಾರರು ಇರುವಂಥ ಹೊಟೇಲ್ ಆರಂಭಿಸಿ, ಸಾಮಾಜಿಕ ಸ್ಥರದಲ್ಲಿ ಜಾತಿ ವ್ಯವಸ್ಥೆಯ ಬದಲಾವಣೆಗೆ ಮುನ್ನುಡಿ ಬರೆದ ಹಿಂದೂ ಧರ್ಮದ ಪುನರುದ್ದಾರಕ ಎಂದು ಪ್ರತಿಪಾದಿಸಿದರು.

ಗಾಂಧೀಜಿ, ನೆಹರು, ಜಿನ್ನಾ, ಸಾವರ್ಕರ್ ಎಲ್ಲರೂ ಲಂಡನಿಗೆ ಹೋದರು. ಆದರೆ ಅವರ ನೆಲದಲ್ಲೇ ಅವರನ್ನು ನಡುಗಿಸಿದ್ದು, ಸಾವರ್ಕರ್. ಲಂಡನ್ನಿನ ವೈಭವಕ್ಕೆ ಮರುಕವಾಗದೆ ವಾಪಸ್ ಬಂದರು. ೧೯೦೮ರಲ್ಲಿ ಸಾವರ್ಕರ್ ರಚಿಸಿದ ಪುಸ್ತಕ ಸರಣಿ ಮರುಮುದ್ರಣ ಕಂಡಿತು, ೧೯೪೨ರವರೆಗೆ ಸುಭಾಷಚಂದ್ರ ಬೋಸ್‌ರೂ ಮುದ್ರಿಸಿ ಹಂಚಿ, ಕ್ರಾಂತಿಗೆ ಪ್ರೇರಣೆ ನೀಡಿದ್ದು ಸಾವರ್ಕರ್ ಪುಸ್ತಕ ಎಂದರು.
ಕಾAಗ್ರೆಸ್ ಕಟ್ಟಿದ್ದು ಎ.ಒ.ಹ್ಯೂಮ್. ಇಂದಿಗೂ ಕಾಂಗ್ರೆಸ್ಸಿಗರು ಅದೇ ಗುಲಾಮಿ ಮನಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ಇರುವುದು ಇಂದಿರಾ ಕಾಂಗ್ರೆಸ್. ಆದರೆ ಭಾರತ ಬದಲಾಗುತ್ತಿದೆ. ರಾಜಪಥನಂಥ ಗುಲಾಮಿ ಭಾವದಿಂದ ಕರ್ತವ್ಯ ಪಥದತ್ತ ಸಾಗುತ್ತಿದೆ. ಇಡೀ ವಿಶ್ವ ಭಾರತದ ಮಾತು ಕೇಳುತ್ತಿದೆ ಎಂದು ಹೇಳಿದರು.
ಚಾಮರಾಜ ದೊಡ್ಡಮನಿ, ಡಾ.ಜಗದೀಶ ಕಟ್ಟಿಮನಿ ಮುಖ್ಯಅತಿಥಿಗಳಾಗಿದ್ದರು. ನಾಗೇಂದ್ರ ಕಬಾಡೆ ಅಧ್ಯಕ್ಷತೆ ವಹಿಸಿದ್ದರು. ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ನಿತೀನ ಗುತ್ತೇದಾರ್, ಅಶ್ವೀನಕುಮಾರ, ಪ್ರಶಾಂತ ಗುಡ್ಡಾ, ಸತೀಶ ಮಾಹೋರ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ರಾಮುರೆಡ್ಡಿ, ವಿಶ್ವನಾಥ ಸಾಲಿಮಠ, ಶ್ರೀಶೈಲ ಮೂಲಗೆ, ಮಲ್ಲಿನಾಥ ಅವರಾದಿ, ನಿತೀಶಕುಮಾರ, ಭಾರ್ಗವಿ, ಡಾ.ಸುಧಾ ಹಾಲಕಾಯಿ ಇತರರಿದ್ದರು. ಶಿವರಾಜ ಸಂಗೋಳಗಿ ಸ್ವಾಗತಿಸಿದರು.

ಮಹಾತ್ಮ ಗಾಂಧೀಜಿ ಹತ್ಯೆಯಲ್ಲಿ ಸಾವರ್ಕರ್ ಅವರ ಪಾತ್ರ ಇಲ್ಲ ಎಂದು ಮದ್ರಾಸ್ ಕೋರ್ಟ್ ಹೇಳಿತ್ತು. ಆದರೂ ಕಾಂಗ್ರೆಸ್ಸಿಗರೂ ಅವರನ್ನು ಗಾಂಧಿ ಹಂತಕ ಎನ್ನುತ್ತಾರೆ. ಹಾಗಾದರೆ ಇವರಿಗೆ ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಮೇಲೆ ಗೌರವ, ವಿಶ್ವಾಸವೇ ಇಲ್ಲವೇ?| ಚಕ್ರವರ್ತಿ ಸೂಲಿಬೆಲೆ, ವಾಗ್ಮಿ ಅಂಕಣಕಾರ