ಸಂಬರಗಿ: ಕಿರಣಗಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಶುಕ್ರವಾರ ಜರುಗಿತು.
ಇಲ್ಲಿನ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ ಬೆಂಬಲಿತ ಸಿದ್ದಗೌಡ ಮಲಗೌಡ ಪಾಟೀಲ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಾಬುರಾವ್ ಗೋವಿಂದ ಚವ್ಹಾಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಮಲ್ಲಪ್ಪ ನಂದಗಾಂವ್, ಶಿವರಾಜ ನಂದಗಾವ್, ಬಾಳಾಸಾಬ್ ವಾಘಮೋಡೆ, ಶಂಕರ ಕಾಂಬಳೆ, ದಾನವ್ವ ಮೆಮಢಿಗೇರಿ, ಕಸ್ತೂರಿ ಢವಳೇಶ್ವರ, ಬುರಾನ್ ಸನದಿ. ಮುಖಂಡರಾದ ಅಡಿವೇಶ ನಂದಗಾಂವ್, ಪಿಂಟು ಸರ್ಕಾರ್, ಸುರೇಶ ಮೆಂಡಿಗೇರಿ, ಮುರಗೆಪ್ಪ ತೇಲಿ, ತಮ್ಮಣ್ಣ ಮೆಂಡಿಗೇರಿ, ಶಿವಪ್ಪ ನಂದಗಾಂವ್, ಶ್ರೀಶೈಲ್ ನಂದಗಾಂವ್, ಅನೀಲ ಕೋಳಿ, ರಫೀಕ್ ಮುಲ್ಲಾ, ಶ್ರೀಶೈಲ್ ಮೆಂಡಿಗೇರಿ, ಸಚಿನ ಪಾಟೀಲ, ಚುನಾವಣಾಕಾರಿಯಾಗಿ ಆರ್.ಎನ್.ನೂಲಿ ಕಾರ್ಯ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ರಮೇಶ ಗುರವ ಇದ್ದರು.