ಚಾಮರಾಜನಗರ: ಮೇಯಲು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಗೆ ಇರಿಸಿದ್ದ ಸಿಡಿಮದ್ದು ತಿಂದು ಹಸುವಿಗೆ ತೀವ್ರವಾದ ಗಾಯವಾಗಿದೆ.
ತಾಲೂಕಿನ ಹೆಗ್ಗವಾಡಿಪುರ ಗ್ರಾಮದ ಗುರುಲಿಂಗಯ್ಯ ಅವರಿಗೆ ಸೇರಿದ ಹಸುವನ್ನು ಮಂಗಳವಾರ ಎಂದಿನಂತೆ ಮೇವು ಮೇಯಿಸಲು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಜಮೀನೊಂದರಲ್ಲಿ ಕಾಡು ಪ್ರಾಣಿಗಳ ಬೇಟೆಗಾಗಿ ಕಿಡಿಗೇಡಿಗಳು ಹಾಕಿದ್ದ ಸಿಡಿಮದ್ದನ್ನು ಹಸುವು ತಿಂದ ಪರಿಣಾಮವಾಗಿ ಅದು ಸಿಡಿದು ಬಾಯಿಗೆ ತೀವ್ರತರವಾದ ಪೆಟ್ಟಾಗಿದೆ. ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈತ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.