ಜಿಲ್ಲೆ

ಸಿಡಿ ಪ್ರಕರಣ, ಯುವತಿ ಅಜ್ಜಿ ಮನೆಗೂ ಬಂತು ನೊಟೀಸ್

ವಿಜಯಪುರ: ಜಾರಕಿಗೊಳಿ ಸಿಡಿ ವಿಚಾರಕ್ಕೆ ಭಂದಿಸಿದಂತೆ ಯುವತಿಯ(ಸಂತ್ರಸ್ಥೆ) ಮೂಲ ಕಂಡುಹಿಡಿಯಲು ವಿಜಯಪುರ ಜಿಲ್ಲೆಗೆ ಕಬ್ಬನಪಾರ್ಕ್ ಪೊಲೀಸರ ತಂಡ ಆಗಮಿಸಿದೆ. ತನಿಖೆಯ ಜಾಡು ಹಿಡಿದು ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣಕ್ಕೆ ಆಗಮಿಸಿದ ಕಬ್ಬನಪಾರ್ಕ್ ಠಾಣೆ ಪೊಲೀಸರು ನಿಡಗುಂದಿ ಪಟ್ಟಣದಲ್ಲಿರುವ ಯುವತಿಯ(ಸಂತ್ರಸ್ಥೆ) ತಾಯಿಯ ತವರು ಮನೆ(ಅಮ್ಮಮ್ಮನ ಮನೆ) ಭೇಟಿ ನೀಡಿದ್ದಾರೆ. ಬಾಲ್ಯದಲ್ಲಿ ಅಮ್ಮಮ್ಮನ ಮನೆಯಲ್ಲೇ ಇರುತ್ತಿದ್ದ ಯುವತಿ, ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಓದಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಲ್ಲಿಯೂ ಯುವತಿಗೆ ಲಿಂಕ್ ಇರುವ ಕಾರಣದಿಂದ ಬೆಂಗಳೂರಿನಿಂದ ಬಂದ ಪೊಲೀಸ್ ತಂಡ ಚುರುಕಿನ ತನಿಖೆ ನಡೆಸುತ್ತಿದ್ದಾರೆ. ನಿಡಗುಂದಿಯಲ್ಲಿ ಕೇಸ್ ಗೆ ಸಂಭಂಧಿಸಿದಂತೆ ಮನೆಯಲ್ಲಿ ಯಾರೂ ಇಲ್ಲದ ಕಾರಣಕ್ಕೆ ಯುವತಿಯ ಅಮ್ಮಮ್ಮನ ಮನೆಗೆ ನೊಟೀಸ್ ಅಂಟಿಸಿದ್ದಾರೆ ಕಬ್ಬನಪಾರ್ಕ್ ಠಾಣೆ ಪೊಲೀಸರು. ನೊಟೀಸ್ ನಲ್ಲಿರುವ ಫೋನ್ ನಂಬರ್ ಅಥವಾ ಈ‌ಮೇಲ್ ಐಡಿ ಸಂಪರ್ಕಿಸುವಂತೆ ಸೂಚನೆ ನೀಡಿದ್ದಾರೆ. ದಿನೇಶ ಕಲ್ಲಹಳ್ಳಿ ನೀಡಿರುವ ದೂರಿನ ಕುರಿತು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಅಂಟಿಸಲಾಗಿದೆ.