ಜಿಲ್ಲೆ

ಸಿಡಿ ಕೇಸ್ ಸಿಬಿಐ ತನಿಖೆ ಆಗಲಿ, ಯತ್ನಾಳ

ವಿಜಯಪುರ: ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಭಂದಿಸಿದಂತೆ ಸಂತ್ರಸ್ತ ಯುವತಿಯಿಂದ ವಿಡಿಯೋ ಬಿಡುಗಡೆ ವಿಚಾರದ ಕುರಿತು ಯತ್ನಾಳ ಮಾತನಾಡಿದ್ದಾರೆ. ರಮೇಶ ಜಾರಕಿಹೊಳಿ ಕೇಸ್ ಎಸ್ ಐ ಟಿ ಬದಲು ಸಿಬಿಐ ತನಿಖೆಗೆ ಕೊಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಇದು ಒಂದು ದೊಡ್ಡ ಶಡ್ಯಂತ್ರ ಇದೆ, ರಾಜಕೀಯವಾಗಿ ಅವರನ್ನು ಮುಗಿಸಲು ವ್ಯವಸ್ಥಿತವಾಗಿ ಒಂದು ಷಡ್ಯಂತ್ರ ನಡೆದಿದೆ. ನಿನ್ನೆ ರಮೇಶ ಜಾರಕಿಹೊಳಿ ಅವರು ಹೇಳಿದ್ದು ಸತ್ಯವಿದೆ ಎಂದು ಯತ್ನಾಳ ಹೇಳಿದ್ದಾರೆ. ಸಿಡಿ ಪ್ರಕರಣವನ್ನು ಎಸ್ ಐ ಟಿ ತನಿಖೆಗೆ ಕೊಡಲಾಗಿದೆ. ಎಸ್ ಐ ಟಿ ತನಿಖೆ ಎಷ್ಟರಮಟ್ಟಿಗೆ ಪಾರದರ್ಶಕತೆಯಿಂದ ನಡೆಯುತ್ತದೆ ಎನ್ನುವುದೇ ನನಗೆ ಸಂಶಯ ಮೂಡಿಸುತ್ತಿದೆ‌. ಅಲ್ಲಿರುವ ಓರ್ವ ಅಧಿಕಾರಿ ವಿಜಯೇಂದ್ರ ಹೇಳಿದಂತೆ ಕೇಳುತ್ತಾರೆ. ಹೀಗಾಗಿ ಎರಡೂ ಪಾರ್ಟಿಯಲ್ಲಿನ ಒಬ್ಬೊಬ್ಬ ನಾಯಕರು ಜಾರಕಿಹೊಳಿಯನ್ನು ವ್ಯವಸ್ಥಿತವಾಗಿ ಮುಗಿಸಲು ಪ್ಲಾನ್ ಮಾಡಿದ್ದಾರೆ. ಬಿಜೆಪಿಯ ಓರ್ವ ಉನ್ನತ ನಾಯಕ ಹಾಗೂ ಕಾಂಗ್ರೆಸ್ ನಲ್ಲಿನ ಓರ್ವ ಉನ್ನತ ನಾಯಕ ಸೇರಿ ಷಡ್ಯಂತ್ರ ರೂಪಿಸಿದ್ದಾರೆ. ಜಾರಕಿಹೊಳಿ ದೂರು ನೀಡಿದ ತಕ್ಷಣ ಯುವತಿ ವಿಡಿಯೋ ಹೊರಗೆ ಬರುತ್ತೆ, ಇದು ಪಕ್ಕಾ ಪ್ಲಾನಿಂಗ್ ಇದೆ. ಎಸ್ ಐ ಟಿ ಬದಲು ಸಿಬಿಐ ತನಿಖೆಗೆ ಕೊಡಬೇಕು ಎಂದು ಯತ್ನಾಳ ಆಗ್ರಹಿಸಿದ್ದಾರೆ. ಇಷ್ಟೆ ಅಲ್ಲದೆ ಇನ್ನು ಬಹಳ ಜನ್ರ ಸಿಡಿಗಳು ಇರಬಹುದು, ಬಿಜೆಪಿಯ ಉನ್ನತ ನಾಯಕನ ಮಗನ ಬಳಿ ಹಾಗೂ ಕಾಂಗ್ರೆಸ್ ಉನ್ನತ ನಾಯಕನ ಮನೆಯಲ್ಲಿ ಸಿಡಿಗಳು ಇವೆ. ಸಿಬಿಐ ನಿಂದ ತನಿಖೆ ಮಾಡಿಸಿ, ಬ್ಲಾಕ್ ಮೇಲ್ ಮಾಡುವ ರಾಜಕಾರಣಿಗಳನ್ನು ಜೈಲಿಗೆ ಅಟ್ಟಬೇಕು. ಇಂತಹ ರಾಜಕಾರಣಿಗಳನ್ನು ಜೈಲಿಗೆ ಅಟ್ಟದಿದ್ರೆ ಕರ್ನಾಟಕದಲ್ಲಿ ಕೆಟ್ಟ ಸಂಸ್ಕ್ರತಿ ಆರಂಭವಾಗುತ್ತದೆ ಎಂದು ಯತ್ನಾಳ ಆಗ್ರಹಿಸಿದ್ದಾರೆ. ಜಾರಕಿಹೊಳಿಗೆ ಸಂಭಂದಿಸಿದಂತೆ ಮೊದಲಿನ ಹಾಗೂ ನಿನ್ನೆಯ ವಿಡಿಯೋ ಎರಡರಲ್ಲೂ ಯುವತಿಯ ಭಾಷೆಗಳು ಬದಲಾವಣೆಯಾಗಿವೆ. ಮೊದಲಿನ ವಿಡಿಯೋದಲ್ಲಿ ಬೀದರ ಭಾಷೆ ಇದೆ, ನಿನ್ನೆಯ ವಿಡಿಯೋದಲ್ಲಿ ಸುಪೀರಿಯರ್ ಕನ್ನಡ ಬಳಕೆ ಆಗಿದೆ. ಭಾಷೆಗಳು ಹೇಗೆ ಚೇಂಜ್ ಆಗಿವೆ? ಇದನ್ನು ಬಿಜೆಪಿ ಉನ್ನತ ನಾಯಕರು ಅಥವಾ ಕಾಂಗ್ರೆಸ್ ಉನ್ನತ ನಾಯಕರು ಹೇಳಿಸಿದ್ದಾರೋ ಗೊತ್ತಿಲ್ಲ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.