ಜಿಲ್ಲೆ

ಸಿಟಿ ರವಿಗೆ ಬರೀ ಸೀಟಿ ಹೊಡೆಯುವುದೇ ಅಭ್ಯಾಸ

ಚಾಮರಾಜನಗರ: ಜಾತಿ-ಧರ್ಮದ ವಿಚಾರದಲ್ಲಿ ಸಿ.ಟಿ.ರವಿ ಅವರಿಗೆ ಬರಿ ಸೀಟಿ ಹೊಡೆಯುವುದೊಂದೆ ಅಭ್ಯಾಸವಾಗಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿರುಗೇಟು ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಬ್ರಹ್ಮಶ್ರೀನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವೇಳೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಶತ್ರು ದೇಶಕ್ಕೆ ಜೈ ಕಾರ ಕೂಗಿದರೇ, ಗಣೇಶನಿಗೆ ಕಲ್ಲು ತೂರಿದರೇ ಹೇಡಿಗಳು ಸುಮ್ಮನೆ ಇರಬಹುದು ಆದರೇ ಶುದ್ಧ ರಕ್ತದವರು ಸುಮ್ಮನೇ ಇರಲ್ಲ ಎಂಬ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ.ಟಿ.ರವಿಗೆ ಬರಿ ಸೀಟಿ ಹೊಡೆಯುವುದೊಂದೆ ಕೆಲಸ. ನಾವು ಭಾರತೀಯರು, ಯಾರೋ ಪಾಕಿಸ್ಥಾನ್ ಜಿಂದಾಬಾದ್ ಅಂದ್ರೆ ನಾವು ಒಪ್ಪಿಕೊಳ್ಳಲು ಆಗುವುದಿಲ್ಲ. ಬಿಜೆಪಿಯವರು ಭಾರತಾಂಬೆ ಎಂದು ಹೇಳುತ್ತಾರೆ ಆದರೇ ಇಡೀ ರಾಜ್ಯದಲ್ಲಿ 1ನೇ ತರಗತಿ ಓದುವ ಮಗು ಸಂವಿಧಾನದ ಪೀಠಿಕೆ ಓದುತ್ತಿದೆ ಎಂದರೇ ಅದಕ್ಕೆ ಸಿದ್ದರಾಮಯ್ಯ ಅವರ ಸರ್ಕಾರ ಕಾರಣವಾಗಿದೆ. ಹಾಗೇ ಸಂವಿಧಾನ ಪೀಠಿಕೆ ವಾಚಿಸುವವರ ಸಂಖ್ಯೆ ಹೆಚ್ಚಾದರೇ ಸಿ.ಟಿ.ರವಿ ಅಂತವರ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.

ಧಾರ್ಮಿಕ ಕ್ಷೇತ್ರ ಅಂದ ತಕ್ಷಣ ಬಿಜೆಪಿಯವರಿಗೆ ಬರಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಅವರಿಗೆ ಮಾಡೋಕೆ ಏನು ಕೆಲಸ ಇಲ್ಲ. ರಾಜ್ಯದಲ್ಲಿ ಕನ್ನಡ ಶಾಲೆಯನ್ನು ಉಳಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಕಟ್ಟಡ ಹಾಗೂ ಶಿಕ್ಷಕರ ವಿಚಾರದಲ್ಲಿ ಸಮಸ್ಯೆ ಇದೆ. ಆದರೇ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸವನ್ನು ನಮ್ಮ ಸಿದ್ದರಾಮಯ್ಯ ಸರ್ಕಾರ ಹಂತಹಂತವಾಗಿ ಮಾಡುತ್ತಿದೆ.ಆದರೇ ನಾವು ಅಧಿಕಾರಕ್ಕೆ ಬಂದ ನಂತರ 13 ಸಾವಿರ ಶಿಕ್ಷಕ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 18 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಹೇಳಿದರು.