ನಾಪೋಕ್ಲು: ದಾರಿಯಲ್ಲಿ ಸಿಕ್ಕಿದ ಹಣವನ್ನು ಹಿಂದಿರುಗಿಸಿ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಶಾಲಾ ವಾಹನ ಚಾಲಕ ವೃತ್ತಿ ಮಾಡುತ್ತಿರುವ ಬಲ್ಲಮ್ಮಾವಟ್ಟಿ ನಿವಾಸಿ ಕೆ.ಎಸ್.ಶಿವಾಜಿ ಎಂಬವವರು ಬುಧವಾರ ಪಟ್ಟಣದ ಬಸ್ ನಿಲ್ದಾಣದ ಸಮೀಪ ತೆರಳುತ್ತಿದ್ದಾಗ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿರುವ ಹಣದ ಪ್ಯಾಕೆಟ್ ಸಿಕ್ಕಿದೆ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ತಿಳಿಸಿದ ಮೇರೆಗೆ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಇದನ್ನು ಗಮನಿಸಿದ ಹಣ ಕಳೆದುಕೊಂಡಿದ್ದ ಹೋಮ್ ಡೆಲಿವರಿ ಮಾಡುತ್ತಿರುವ ಗಗನ್ ಎಂಬುವರು ಕೆ.ಎಸ್.ಶಿವಾಜಿ ಅವರನ್ನು ಸಂಪರ್ಕಿಸಿದಾಗ ಗಗನ್ ಕಳೆದುಕೊಂಡಿದ್ದ 2,520 ರೂ.ಗಳನ್ನು ಅವರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.