ಜಿಲ್ಲೆ

ಸಿಎಂ ಸಿದ್ದರಾಮಯ್ಯ ಗೈರು ಹಾಜರಿಗೆ ಸಂಸದ ಗರಂ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಗೈರಾದ ಸಿಎಂ ಸಿದ್ದರಾಮಯ್ಯ ನಡೆ ವಿರುದ್ಧ ಸಂಸದ ಗೋವಿಂದ ಎಂ.ಕಾರಜೋಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,ಈ ಸಭೆಯಲ್ಲಿ ದೇಶದ ಎಲ್ಲ ರಾಜ್ಯಗಳ ಸಿಎಂಗಳು ಭಾಗಿಯಾಗಿದ್ದಾರೆ.

ಅನುದಾನ,ಯೋಜನೆಗಳ ಕುರಿತು ಚರ್ಚಿಸಿದ್ದಾರೆ,ಆದರೆ ನಮ್ಮ ಸಿಎಂ ಸಭೆಗೆ ಹಾಜರಾಗಿದೆ ರಾಜಕಾರಣ ಮಾಡುತ್ತಿರುವುದು ದು ರ್ದೈವದ ಸಂಗತಿ. ಕೇಂದ್ರ ಅನುದಾನ ಕೊಡುತ್ತಿಲ್ಲವೆಂದು ಹಾದಿಬೀದಿಯಲ್ಲಿ ಮಾತನಾಡುವ ಬದಲು ಸಭೆಯಲ್ಲಿ ರಾಜ್ಯದ ಯೋಜನೆ ಗಳ ಬಗ್ಗೆ ಪ್ರಸ್ತಾಪಿಸಬೇಕಿತ್ತು. ನಮ್ಮ ರಾಜ್ಯದ ಎಚ್‌ಎಎಲ್ ಕಂಪನಿಯನ್ನು ಆಂಧ್ರಪ್ರದೇಶ ಸಿಎಂ ಚಂದ್ರಬಾಬುನಾಯ್ಡು ತಮ್ಮ ರಾಜ್ಯಕ್ಕೆ ತೆಗೆದುಕೊಂಡು ಹೋಗಲು ಯತ್ನಿಸಿದ್ದಾರೆ. ಮಡಕಶಿರಾ ಬಳಿ 10 ಸಾವಿರ ಎಕರೆ ಜಮೀನು ಕೊಡ್ತೇವೆ ನಮಗೆ ಕೊಡಿ ಎಂದಿದ್ದಾರೆ.

ಕೋವಿಡ್ ಹರಡುತ್ತಿದ್ದು,ರಾಜ್ಯಸರ್ಕಾರ ಕೂಡಲೇ ಎಚ್ಚೆತ್ತು,ಟೆಸ್ಟಿಂಗ್‌ಲ್ಯಾಬ್,ಆಕ್ಸಿಜನ್ ಘಟಕ,ಔಷಧ ಸಹಿತ ಅಗತ್ಯ ಮೂಲ ಸೌಕರ‌್ಯ ಗಳನ್ನು ಒದಗಿಸಬೇಕು. ರಾಮನಗರ ಹೆಸರು ಬದಲಾವಣೆ ಗಿಮಿಕ್,ಯಾವುದೇ ಲಾಭ ಇಲ್ಲ. ರಾಮನಗರ ಹೆಸರು ಜನರ ಭಾವನಾತ್ಮಕ ವಾಗಿದೆ. ಹೆಸರು ಬದಲಾವಣೆ ಕೈಬಿಡಬೇಕು. ರಿಯಲ್ ಎಸ್ಟೇಟ್‌ಗೆ ಪ್ರಚೋದಿಸಲು ಹೆಸರು ಬದಲಾಯಿಸಿದ್ದಾರೆ. ದೇಶಕ್ಕೆ ಆಹಾರ ಧಾ ನ್ಯದ ಅವಶ್ಯಕತೆ ತುಂಬಾ ಇದೆ. ರಿಯಲ್ ಎಸ್ಟೇಟ್‌ನಿಂದ ರೈತರು ಶ್ರೀಮಂತರಾಗುತ್ತಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಆದರೆ ಜನರ ಕೈಯಲ್ಲಿ ಹಣ ಬಹಳ ದಿನಗಳ ಕಾಲ ಉಳಿಯಲ್ಲ,ಕೃಷಿ ಭೂಮಿ ಉಳಿಸಬೇಕಿದೆ ಎಂದರು.