oppo_2 
ಜಿಲ್ಲೆ

ಸಿಎಂ, ಸಚಿವರಿಗೆ ಕಿಮ್ಮತ್ತಿಲ್ಲವೇ?

ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾ ಗ್ರಾಮ ಪಂಚಾಯಿತಿ ನಡೆದಿರುವ ಭ್ರಷ್ಟಾಚಾರವನ್ನು ತನಿಖೆ ನಡೆಸಿ, ಅರ್ಧಕ್ಕೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸರ್ವ ಸಮಾಜ ಕಲ್ಯಾಣ ಸಮಿತಿ ಅಧ್ಯಕ್ಷ ವಿಠಲ್ ಕೋಣೆಕರ್ ಆಗ್ರಹಿಸಿದರು.
ಮೂರು ವರ್ಷದ ಹಿಂದೆ ಮನರೇಗಾ ರೂ.೨೮ ಲಕ್ಷ ಅನುದಾನದಲ್ಲಿ ಗ್ರಾಪಂ ಕಟ್ಟಡ ಆರಂಭಿಸಿದ್ದು, ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ೧೯ ಲಕ್ಷ ರೂ. ವೆಚ್ಚದ ಕಸ ವಿಲೇವಾರಿ ಘಟಕ ಪೂರ್ಣವಾಗಿಲ್ಲ. ನಿಂಬರ್ಗಾ ತಾಂಡಾದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನೂತನ ಕೆರೆಗೆ ಅರ್ಧವೂ ಮಾಡದೆ, ಭಾಗಶಃ ಹಣ ಎತ್ತಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮೂರು ಕೋಟಿ ರೂ. ವೆಚ್ಚದ ಕೆರೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಹಾರಿಗೆ ಉತ್ತರ ನೀಡುತ್ತಾರೆ. ೨೦೨೧-೨೨ನೇ ಸಾಲಿನ ೧೫ನೇ ಹಣಕಾಸು ಯೋಜನೆ ಮತ್ತು ಡಿಸಿಬಿ ಖಾತೆಯಿಂದ ರೂ.೨೭ ಲಕ್ಷ ರೂ. ದುರುಪಯೋಗವಾಗಿದೆ. ಈ ಬಗ್ಗೆ ಜಿಲ್ಲಾ ತನಿಖಾಧಿಕಾರಿಗಳ ವರದಿಯಲ್ಲಿ ತಪಿತಸ್ಥರೆಂದು ನಮೂದಿಸಲಾಗಿದೆ. ಆದರೆ ತಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿಲ್ಲ. ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಬೇಕು ಎಂದು ಆಗ್ರಹಿಸಿದರು.
ಬೀಗ ಜಡಿದು ಪ್ರತಿಭಟನೆ: ಭ್ರಷ್ಟ ಸಿಬ್ಬಂದಿಯನ್ನು ತೊಲಗಿಸಿ ಪಂಚಾಯತಿ ಉಳಿಸಿ ಹಾಗೂ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಆ.೮ರಂದು ಬೆಳಗ್ಗೆ ೧೧ಕ್ಕೆ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸೂರ್ಯಕಾಂತ ಕಂಟೆಕೋರ, ಚಂದ್ರಕಾAತ ದುಗೊಂಡ, ಪರಮೇಶ್ವರ ಶಿವಗೊಂಡಗೋಳ, ಮಹಿಬೂಬ್‌ಸಾಬ, ಶಾಂತಕುಮಾರ ಯಳಸಂಗಿ, ಸಿದ್ದರಾಮ ನಾಗೂರ, ಪ್ರಕಾಶ, ಸರ್ವೋದಯ, ಸೂರ್ಯಕಾಂತ ಕರುಣಕರï ಮತ್ತಿತರರಿದ್ದರು.

ಸಿಎಂ, ಸಚಿವರಿಗೆ ಕಿಮ್ಮತ್ತಿಲ್ಲ: ನಿಂಬರ್ಗಾ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರ, ಅರ್ಧಂಬರ್ಧ ಕಾಮಗಾರಿಗಳ ಕುರಿತು ಕಳೆದ ಫೆ.೮ರಂದು ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿಗಳ ಜನಸ್ಪಂದನಾ ಸಭೆಯಲ್ಲಿ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಜನಸ್ಪಂದನಾ ಸಭೆಯಲ್ಲೂ ಮನವಿ ಸಲ್ಲಿಸಲಾಗಿತ್ತು. ಇಷ್ಟೆಲ್ಲ ಆದರೂ ಕ್ರಮ ಕೈಗೊಂಡಿಲ್ಲ. ಸಿಎಂ, ಸಚಿವರಿಗೂ, ಅವರು ನಡೆಸುವ ಜನಸ್ಪಂದನೆಗೆ ಕಿಮ್ಮತ್ತಿಲ್ಲವೆಂದ ಮೇಲೆ ಸಭೆ ನಡೆಸುವ ಅವಶ್ಯವೇನಿದೆ ಎಂದು ವಿಠಲ್ ಕೋಣೆಕರ್ ಆಕ್ರೋಶ ವ್ಯಕ್ತಪಡಿಸಿದರು.