ಜಿಲ್ಲೆ

ಸಿಎಂ ವೈಮಾನಿಕ ಸಮೀಕ್ಷೆ ಇಂದು

ವಾದಿರಾಜ ವ್ಯಾಸಮುದ್ರ ಕಲಬುರಗಿ
ಒಂದೆಡೆ ಮಳೆ ಮತ್ತೊಂದೆಡೆ ಪ್ರವಾಹ ಅಪ್ಪಳಿಸಿದ ಪರಿಣಾಮವಾಗಿ ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳು ತತ್ತರಿಸಿವೆ. ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿ ಒಂದು ಸಾವಿರ ಕೋಟಿ ರೂ. ಎಂದು ಜಿಲ್ಲಾಡಳಿತ ವರದಿ ಸಿದ್ಧಪಡಿಸಿದೆ ಎನ್ನಲಾಗಿದ್ದು, ಪ್ರಕೃತಿ ವಿಕೋಪದ ಡಬಲ್ ಶಾಕ್ ರೈತರನ್ನು ಬಬರ್ಾದ್ ಮಾಡಿದೆ. ಸಮೃದ್ಧವಾಗಿ ಬರಬೇಕಾಗಿದ್ದ ಬೆಳೆಗಳೊಂದಿಗೆ ಅನ್ನದಾತರ ಬದುಕು ನೀರಲ್ಲಿ ಕೊಚ್ಚಿ ಹೋಗಿದೆ.
ಇಂಥ ಸ್ಥಿತಿಯಲ್ಲಿ ಬುಧವಾರ ನಾಡದೊರೆ ಬಿ. ಎಸ್. ಯಡಿಯೂರಪ್ಪನವರು ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ಸ್ಥಿತಿ-ಗತಿ ಅರಿತುಕೊಳ್ಳಲು ವೈಮಾನಿಕ ಸಮೀಕ್ಷೆಗೆ ಸಿದ್ಧವಾಗಿದ್ದಾರೆ. ವೈಮಾನಿಕ ಸಮೀಕ್ಷೆಯಿಂದ ಲಾಭವಿಲ್ಲ. ಆದ್ದರಿಂದ ಎಲ್ಲ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಹೀಗಾಗಿ ವೈಮಾನಿಕ ಸಮೀಕ್ಷೆಗೂ ರಾಜಕೀಯ ಗ್ರಹಣ ಬಡಿದಂತಾಗಿದೆ.
ಬುಧವಾರ ವಿಮಾನದ ಮೂಲಕ ಬರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಇಲ್ಲಿಯ ಏರ್ಪೋಟರ್್ನಲ್ಲಿ ಇಳಿಯಲಿದ್ದಾರೆ. ಇಲ್ಲಿಯೇ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ನಂತರ ವೈಮಾನಿಕ ಸಮೀಕ್ಷೆ ಆರಂಭಿಸಿ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳಲಿದ್ದಾರೆ.
ಸಿಎಂ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ರಾತ್ರಿ ಹತ್ತರವರೆಗೆ ಸಭೆ ನಡೆಸಿದರು. ಬುಧವಾರ ಮುಖ್ಯಮಂತ್ರಿ ಜತೆ ನಡೆಯುವ ಸಭೆಯಲ್ಲಿ ಒಂದು ಸಾವಿರ ಕೋಟಿ ರೂ. ನಷ್ಟವನ್ನು ಕಲಬುರಗಿ ಜಿಲ್ಲೆ ಅನುಭವಿಸಿದೆ. ಇನ್ನೂ ಬೆಳೆ ಸಮೀಕ್ಷೆ ಆಗಬೇಕಾಗಿದೆ ನಂತರ ಮತ್ತೇ ನಷ್ಟದ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ. ವಿ. ಜೋತ್ಸ್ನಾ ಅವರು ವರದಿ ನೀಡುವ ಸಾಧ್ಯತೆಗಳು ಇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜೋತ್ಸ್ನಾ ಅವರು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಎಸ್ಪಿ, ಜಿಲ್ಲಾ ಪಂಚಾಯಿತಿ ಸಿಇಓ, ಮಹಾನಗರ ಪಾಲಿಕೆ ಆಯುಕ್ತರು, ಜೆಸ್ಕಾಂ ಎಂಡಿ ಸೇರಿದಂತೆ ಎಲ್ಲ ಪ್ರಮುಖ ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದರು. ರಾತ್ರೋ ರಾತ್ರಿ ಸಾವಿರ ಕೋಟಿ ರು. ನಷ್ಟದ ವರದಿಯೂ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಭೇಟಿ ಪ್ರವಾಹಪೀಡಿತ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದೇ ಭಾವಿಸಲಾಗಿದೆಯಾದರೂ ಮುಂದಿನ ಪರಿಣಾಮಗಳನ್ನು ಕಾದು ನೋಡಲಾಗುತ್ತಿದೆ.
ಮಳೆಯಿಂದಾಗಿ ಸೇಡಂ, ಚಿಂಚೋಳಿ, ಕಲಬುರಗಿ, ಆಳಂದ, ಯಡ್ರಾಮಿ, ಕಾಳಗಿ, ಕಮಲಾಪುರ ತಾಲೂಕುಗಳು ತತ್ತರಿಸಿದರೆ, ಪ್ರವಾಹದಿಂದ ಕಲಬುರಗಿ, ಜೇವಗರ್ಿ, ಅಫಜಲಪುರ, ಯಡ್ರಾಮಿ, ಶಹಾಬಾದ್ ಮತ್ತು ಚಿತ್ತಾಪುರ ತಾಲೂಕುಗಳು ತತ್ತರಿಸಿವೆ. ಹೀಗಾಗಿ ಇಡೀ ಜಿಲ್ಲೆ ಅತಿವೃಷ್ಟಿಯಾಗಿದೆ. ಏನಿಲ್ಲವೆಂದರೂ 2000ಕೋಟಿ ರೂ. ಆಸ್ತಿ ನಷ್ಟವಾಗಿರಬಹುದೆಂದು ಹೇಳಲಾಗುತ್ತಿದೆಯಾದರೂ, ಜಿಲ್ಲಾಡಳಿತ ಒಂದು ಸಾವಿರ ಕೋಟಿ ರು. ವರದಿ ಮಂಡಿಸಲಿದೆ.
ಮಳೆಯಿಂದ ಜಿಲ್ಲೆಯಲ್ಲಿ 89 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಪ್ರವಾಹದಿಂದ ಆಗಿರುವ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಯಬೇಕಾಗಿದೆ. ಅಂದಾಜಿನ ಪ್ರಕಾರ ನಾಲ್ಕು ಲಕ್ಷ ಎಕರೆ ಪ್ರದೇಶದ ಬೆಳೆ ನೀರಲ್ಲಿ ಕೊಚ್ಚಿಹೋಗಿದೆ.
ಜಿಲ್ಲೆಯಲ್ಲಿ 1266 ಮನೆಗಳು ಭಾಗಶ: ಕುಸಿದರೆ 10150ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಎಲ್ಲವೂ ನೀರುಪಾಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾದನ ತಗ್ಗುಗಳು ಬಿದ್ದಿದ್ದು, ಪ್ರಯಾಣಕ್ಕೆ ಅಡ್ಡಿಯಾಗಿದೆ. ಪ್ರಮುಖ ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ.
ಹಾನಿ ಬಗ್ಗೆ ನಾಲ್ಕು ಹಂತದ ಸಮೀಕ್ಷೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮೊದಲ ಹಂತವಾಗಿ ಎಲ್ಲರ ಪ್ರಾಣ ರಕ್ಷಣೆ ಜಿಲ್ಲಾಡಳಿತ ಪ್ರಮುಖ ಹೊಣೆ ಎಂದು ಭಾವಿಸಿ ಆ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಕೊಂಡಿದೆ. ಇದಕ್ಕಾಗಿ 98 ಸದಸ್ಯರ ಸೇನಾ ಪಡೆ, 57 ಸದಸ್ಯರ ಮೂರು ಎನ್ಡಿಆರ್ಎಫ್ ತಂಡಗಳು, 44 ಸದಸ್ಯರ ಎಸ್ಡಿಆರ್ಎಫ್ ತಂಡ ಮತ್ತು 80 ಸದಸ್ಯರ ಅಗ್ನಿಶಾಮಕ ದಳದ ತಂಡಗಳನ್ನು ಜಿಲ್ಲೆಯಲ್ಲಿಡಲಾಗಿದೆ. ಎಲ್ಲ ಕಡೆ ಪೊಲೀಸ್ ಕಣ್ಗಾವಲಂತೂ ಇದ್ದೇ ಇದೆ. ಕಂದಾಯ ಇಲಾಖೆ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಹಗಲೂ ರಾತ್ರಿ ಪ್ರವಾಹದ ವಿರುದ್ಧ ಹೋರಾಡುತ್ತಿದ್ದಾರೆ. ಹೊರ ಜಿಲ್ಲೆಗಳಿಂದಲೂ ಅಧಿಕಾರಿಗಳನ್ನು ಕರೆಸಲಾಗಿದೆ.
ಮೊದಲ ಹಂತವಾಗಿ ಮನೆ ಹಾನಿಯಾಗಿದ್ದರ ಕುರಿತು ಸಮೀಕ್ಷೆ ಮಾಡಲಾಗುತ್ತಿದೆ, ಎರಡನೇ ಹಂತವಾಗಿ ಮನೆಗಳಿಗೆ ನೀರು ಹೊಕ್ಕು ನಷ್ಟವಾಗಿರುವ ಆಸ್ತಿ, ಅಲ್ಲದೇ ಸಾರ್ವಜನಿಕ ಆಸ್ತಿ ಹಾನಿ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ನಂತರ ಬೆಳೆ ಹಾನಿ ಕುರಿತಂತೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿವೆ.
ಭೀಮಾ ನದಿ ತಟದಲ್ಲಿ ಒಟ್ಟು 155 ಹಳ್ಳಿಗಳು, ಬರುತ್ತಿದ್ದರೆ ಕಾಗಿಣಾ, ಬೆಣ್ಣೆತೊರಾ, ಮುಲ್ಲಾಮಾರಿ, ಗಂಡೋರಿ ಹೀಗೆ ಕೆಲವು ಚಿಕ್ಕಪುಟ್ಟ ನದಿಗಳಿಗೆ ಹೊಂದಿಕೊಂಡು ಅನೇಕ ಹಳ್ಳಿಗಳೂ ಇವೆ. ಭೀಮಾ ನದಿ ತಟದಲ್ಲಿ 73 ಹಳ್ಳಗಳಿಗೆ ನೀರು ನುಗ್ಗಿದೆ. ಇವುಗಳಲ್ಲಿ ಕೆಲವು ಹಳ್ಳಿಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಹೀಗಾಗಿ ಈ ಗ್ರಾಮಗಳ ಜನರ ಬದುಕು ದುರಂತಮಯವಾಗಿದೆ. ಮಕ್ಕಳು, ವೃದ್ಧರ
ಸ್ಥಿತಿಯಂತೂ ಹೇಳದಂತಾಗಿದೆ. ಇದರ ನಡುವೆ ಕರೊನಾ ಭಯ ಬೇರೆ.
ಅಫಜಲಪುರ, ಜೇವಗರ್ಿ, ಚಿತ್ತಾಪುರ, ಕಲಬುರಗಿ ತಾಲೂಕುಗಳ ಹಲವು ಗ್ರಾಮಗಳು ಈಗಲೂ ನೀರಿನಲ್ಲಿವೆ. ಪ್ರಮುಖ ಸೇತುವೆಗಳ ಮೇಲೆ ನೀರು ಬಂದಿದ್ದರಿಂದ ಪ್ರಯಾಣಕ್ಕೆ ತೊಂದರೆಯಾಗಿದೆ. ಈ ಎಲ್ಲ ಹಿನ್ನಲೆಯಲ್ಲಿ ಸಿಎಂ ಭೇಟಿಗೆ ಮಹತ್ವ ಬಂದಿದೆ.
ಪ್ರವಾಹದಿಂದ ತತ್ತರಿಸಿರುವ 73 ಗ್ರಾಮಗಳ 27278 ಜನರನ್ನು ರಕ್ಷಿಸಲಾಗಿದೆ ಜಿಲ್ಲೆಯಲಿ ್ಲ ಇದುವರೆಗೆ 162 ಕಾಳಜಿ ಕೇಂದ್ರಗಳನ್ನು ತೆರೆದು 28637 ಜನರಿಗೆ ಅಲ್ಲಿ ಆಶ್ರಯ ಕಲ್ಪಿಸಿ ಅವರಿಗೆ ಊಟೋಪಚಾರದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 573 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಅವರು ಮಾಹಿತಿ ನೀಡಿದ್ದಾರೆ. ನಿತ್ಯ ಮಾಹಿತಿಯಲ್ಲಿ ಬದಲಾವಣೆ ಆಗುತ್ತಿರುವುದರಿಂದ ಮಂಗಳವಾರದ ಮಾಹಿತಿ ಸಿಗಲಿಲ್ಲ.
ಪ್ರವಾಹದಿಂದ ನೊಂದಿರುವ ಕುಟುಂಬಗಳ ಜೀವನ ಎಂದಿನಂತೆ ಬರುವ ತನಕ ಕಾಳಜಿ ಕೇಂದ್ರಗಳನ್ನು ನಡೆಸುವುದು ಸಹ ಅಷ್ಟೇ ಅಗತ್ಯವಾಗಿದೆ.