ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಮುರುಘಾಮಠದ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ೯೩ನೇ ಜಾತ್ರಾ ಮಹೋತ್ಸವದ ಅಂಗವಾಗಿ ಕೊಡಮಾಡುವ ಶ್ರೀ ಮೃತ್ಯುಂಜಯ- ಮಹಾಂತ' ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು,ನಾನು ಇಲ್ಲಿ ಪ್ರಶಸ್ತಿ ಪ್ರದಾನ ಮಾಡಲು ಎಂದುಕೊAಡು ಬಂದಿದ್ದೆ. ಬಂದ ಮೇಲೆ ನನಗೇ ಪ್ರಶಸ್ತಿ ಎಂದು ತಿಳಿಯಿತು. ಹೋದಲ್ಲೆಲ್ಲ ಪ್ರಶಸ್ತಿ ಪ್ರದಾನ ಮಾಡುವ ನನಗೆ ಮುರುಘಾಮಠದ ಮಹನೀಯರ ಹೆಸರಿನ ಪ್ರಶಸ್ತಿ ಲಭಿಸಿರುವುದು ಸಂತಸದ ಸಂಗತಿ. ಶ್ರೀಗಳಿಬ್ಬರ ಆಶೀರ್ವಾದ ಲಭಿಸಿ, ಸಮಗ್ರ ಕರ್ನಾಟಕದ ಅಭಿವೃದ್ಧಿಯ ಜವಾಬ್ದಾರಿಯನ್ನು ಹೆಚ್ಚಿಸಿದೆ' ಎಂದರು.
ಮಠದ ಒಡನಾಟ ಹೊಸದಲ್ಲ
ನನಗೆ ಮುರುಘಾಮಠದ ಒಡನಾಟ ಹೊಸದಲ್ಲ. ಈ ಪ್ರೇರಣಾ ಸ್ಥಳಕ್ಕೆ ತಾಯಿಯೊಂದಿಗೆ ಹಲವಾರು ಬಾರಿ ಬಂದಿದ್ದೇನೆ ಎಂದು ಒಡನಾಟವನ್ನು ಸ್ಮರಿಸಿದರು. ಈಗ ಬಂದಿದ್ದು ಭಕ್ತನಾಗಿಯೇ ಹೊರತು, ಮುಖ್ಯಮಂತ್ರಿಯಾಗಿ ಅಲ್ಲ. ಮಠದ ಖ್ಯಾತಿ ದೇಶಾದ್ಯಂತ ಪಸರಿಸಬೇಕು. ಮಠದ ಅಭಿವೃದ್ಧಿಗೆ ೩ ಕೋಟಿ ರೂ. ನೀಡಲಾಗುತ್ತಿದ್ದು, ಇನ್ನೂ ಹೆಚ್ಚಿನ ಆರ್ಥಿಕ ನೆರವು ನೀಡಲು ಬದ್ಧ ಎಂದು ಸಿಎಂ ಬೊಮ್ಮಾಯಿ ಘೋಷಿಸಿದರು.
ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಶ್ರೀ ಗುರುಮಹಾಂತ ಮಹಾಸ್ವಾಮೀಜಿ, ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಶಾಸಕ ಅರವಿಂದ ಬೆಲ್ಲದ, ಶಿವಲೀಲಾ ವಿನಯ ಕುಲಕರ್ಣಿ, ಸೀಮಾ ಮಸೂತಿ, ಇತರರಿದ್ದರು.