ಜಿಲ್ಲೆ

ಸಿಎಂ ಪುತ್ರ ವಿಜಯೇಂದ್ರ ಸ್ಪೀಡ್‌ಗೆ ಮಧು ಬಂಗಾರಪ್ಪ ಟಾಂಗ್

ನಮ್ಮ ತಂದೆ ಬಂಗಾರಪ್ಪ ಕಿತ್ತೂರು ರಾಣಿ ಚೆನ್ನಮ್ಮ ನಿಗಮ ಮಂಡಳಿ ಮಾಡಿದರು. ಅದು ಅಭಿವೃದ್ಧಿಗೆ ಪೂರಕವಾಗಿತ್ತು. ನಿಗಮ ಮಂಡಳಿ ಘೋಷಣೆ ಮುಖ್ಯವಲ್ಲ, ಅನುದಾನ ಎಷ್ಟು ಕೊಡುತ್ತಾರೆ ಎನ್ನದು ಮುಖ್ಯ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಬಿಜೆಪಿಯ ತೀರ್ಮಾನ ದುರುದ್ದೇಶದಿಂದ ಕೂಡಿದೆ. ವೈಯಕ್ತಿಕವಾಗಿ ಜಾತಿ ಬಗ್ಗೆ ಮಾತನಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಮೊದಲು ಸರ್ಕಾರಗಳು ಕೊಟ್ಟಿರುವ ಕಾರ್ಯಕ್ರಮಕ್ಕೆ ಹಣ ಬಿಡುಗಡೆ ಮಾಡಬೇಕಾಗಿತ್ತು. ನಮ್ಮ ಈಡಿಗ ಸಮುದಾಯದವರು ಸಹ ಈಗ ನಿಗಮ ಮಂಡಳಿ ಕೇಳುತ್ತಿದ್ದಾರೆ. ನಾನು ಕೊಡಬೇಡಿ ಅಂತ ಹೇಳೋದಕ್ಕೆ ಆಗುತ್ತಾ , ಕೊಟ್ಟರೆ ಬೇಡ ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಪಕ್ಷದ ಅಧ್ಯಕ್ಷರಾಗಿದ್ದ ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಅಧಿಕಾರ ಕೊಟ್ಟದ್ದರೆ ಪಕ್ಷದಲ್ಲಿ ಉಳಿಯುತ್ತಿದ್ದರು. ನಾನು ಕೈಮುಗಿದು ಕೇಳಿಕೊಂಡರೂ ಪಕ್ಷ ಬಿಟ್ಟು ಹೋದರು. ಪಕ್ಷ ಅಧಿಕಾರದಲ್ಲಿ ಇದ್ದಾಗ ಮುಖಂಡರಿಗೆ, ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ನೀಡಿಲ್ಲ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಜಾತ್ಯತೀಯ ಪಕ್ಷ ಅಂತ ಹೆಸರು ಇಟ್ಟು,ಜಾತ್ಯತೀತವಾಗಿ ನಡೆದುಕೊಳ್ಳಬೇಕು. ಜೆಡಿಎಸ್‌ನಲ್ಲಿ ಗೊಂದಲವಿದೆ, ಪಕ್ಷವೂ ಸುಮ್ಮನೆ ಕೂತಿದೆ. ನಾನು ಇನ್ನು ಜೆಡಿಎಸ್ ಪಕ್ಷದಲ್ಲೇ ಇದ್ದರೂ ಸಕ್ರಿಯವಾಗಿ ತೊಡಗಿಸಿಕೊಳ್ಳದೆ ಸದ್ಯಕ್ಕೆ ತಟಸ್ಥನಾಗಿದ್ದೇನೆ.ಡಿ.ಕೆ. ಶಿವಕುಮಾರ್ ಹಾಗೂ ನಾವು ಕುಟುಂಬ ಸ್ನೇಹಿತರಾಗಿರುವುದರಿಂದ ಪದೇ ಪದೇ ಭೇಟಿ ಮಾಡುತ್ತಿರುತ್ತೇವೆ. ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನನಗೆ ಎರಡು ಕಣ್ಣುಗಳು ಇದ್ದಂತೆ. ಜೆಡಿಎಸ್‌ನಲ್ಲಿ ಗೊಂದಲ ಇದೆ, ಆದರೆ ಕಾಂಗ್ರೆಸ್ ಗೆ ಹೋಗುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ ಎಂದು ನುಡಿದರು.

ಅಧಿಕಾರ ಇದ್ದಾಗ ಏನು ಬೇಕಾದರೂ ಮಾಡಬಹುದು, ಬಿಜೆಪಿ ಸರ್ಕಾರದಲ್ಲೂ ಶಿರ ಉಪ ಚುನಾವಣೆಯಲ್ಲಿ ಹಣ ಚೆನ್ನಾಗಿ ವರ್ಕ್ಔಟ್ ಆಗಿದೆ. ನಮ್ಮ ತಂದೆಯವರ ಕಾಲದಲ್ಲಿನ ಚುನಾವಣೆಗಳಿಗೂ ಅಂಬುಲೆನ್ಸ್ ಹಾಗೂ ಪೊಲೀಸ್ ಕಾರುಗಳಲ್ಲಿ ದುಡ್ಡು ತರುತ್ತಿದ್ದರು. ಅದೇ ಪದ್ದತಿ ರಾಜ್ಯ, ದೇಶದಲ್ಲೂ ಇದೆ. ಇದು ಒಳ್ಳೆಯ ಸಂಪ್ರದಾಯವಲ್ಲ ಎಂದಷ್ಟೇ ಹೇಳಬಲ್ಲೆ, ವಿಶ್ಲೇಷಣೆ ಮಾಡಲು ನನ್ನಿಂದ ಆಗದು, ಜನರು ತೀರ್ಮಾನ ತೆಗೆದುಕೊಳ್ಳಬೇಕು ಎಂದು ನುಡಿದರು

ನನ್ನ ತಂದೆ ಮುಖ್ಯಮಂತ್ರಿಯಾಗಿದ್ದರು. ನಮಗೆ ಯಾವತ್ತೂ ಕೆಟ್ಟ ಬುದ್ದಿ ಕಲಿಸಿಲ್ಲ. ಒಳ್ಳೆಯ ಬುದ್ದಿಯನ್ನೇ ಹೇಳಿಕೊಟ್ಟಿದ್ದರು. ಸ್ಪೀಡ್ ಎನ್ನುವುದು ನಿಯತ್ತಾಗಿ ಹೋಗಬೇಕು. ಸಾಮಾನ್ಯ ಮಕ್ಕಳಿಂದ ಹಿಡಿದು ಮುಖ್ಯಮಂತ್ರಿಗಳ ಮಕ್ಕಳವರೆಗೂ ಸ್ಪೀಡ್ ಎನ್ನುವುದು ಅಡ್ಡದಾರಿ ಹಿಡಿಯಬಾರದು ಎಂದು ಹೇಳಿದರು.

ಕೋಲಾರ ನಗರದಲ್ಲಿ ಗುರುವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಭೇಟಿಯಾದ ಸುದ್ದಿಗಾರರು ಶಿರಾ ಉಪಚುನಾವಣೆಯ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಎಂ ಪುತ್ರ ವಿಜಯೇಂದ್ರ ಬಗ್ಗೆ ಕೇಳಿದ ಪ್ರಶ್ನೆಗೆ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ್ದು ಹೀಗೆ

ನಾನು ಮಾಜಿ ಸಿಎಂ ಮಗನಾಗಿದ್ದರೂ ತಂದೆ ಯಾವತ್ತೂ ನಮಗೆ ಕೆಟ್ಟ ಬುದ್ದಿ ಹೇಳಿಕೊಟ್ಟಿಲ್ಲ, ಹೀಗಾಗಿ ನಾನು ನಾಲ್ಕು ಬಾರಿ ಸೋತಿದ್ದೇನೆ. ತಂದೆ ಕೆಟ್ಟ ಬುದ್ದಿ ಹೇಳಿಕೊಟ್ಟಿದ್ದರೆ ಎಲ್ಲ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದೆ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಎಂದು ಸಿಎಂ ಪುತ್ರ ವಿಜಯೇಂದ್ರ ಅವರಿಗೆ ಟಾಂಗ್ ನೀಡಿದರು.

ವಿಜಯವಾಣಿ ಸುದ್ದಿಜಾಲ ಕೋಲಾರ