ನಾರಾಯಣ ದೇಸಾಯಿ 
ಜಿಲ್ಲೆ

ಸಿಇಟಿ ಪರೀಕ್ಷೆಯಲ್ಲಿ ಜನಿವಾರಕ್ಕೆ ಅಡ್ಡಿ : ಖಂಡನೆ

ಬಾಗಲಕೋಟೆ: ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಯಜ್ಞೋಪವಿತ(ಜನಿವಾರ) ಧರಿಸಿದಕ್ಕೆ ಸಿಇಟಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡದಿರುವುದು ನಾಚಿಗೇಡಿನ ಸಂಗತಿಯಾಗಿದೆ. ಈ ವಿಚಾರದಲ್ಲಿ ತಪ್ಪು ಎಸೆಗಿದವರನ್ನು ಅಮಾನತುಗೊಳಿಸುವುದರೊಂದಿಗೆ ಅವರ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ಪ್ರಕರಣ ತಂದಿರುವ ದಾಖಲಿಸಿ ಬಂಽಸಬೇಕು ಎಂದು ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪರೀಕ್ಷೆಯನ್ನು ಬಿಗಿಗೊಳಿಸುವ ನೆಪದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಈಗ ಅದು ಅತಿರೇಕಕ್ಕೆ ತಲುಪಿದೆ. ಬೀದರ್‌ನಲ್ಲಿ ಜನಿವಾರ ತೆಗೆಯಲು ಒಪ್ಪದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಲು ಯಾರಿಗೂ ಅಽಕಾರವಿಲ್ಲ. ಸರ್ಕಾರದ ಆದೇಶ ಇಲ್ಲದಿದ್ದರೂ ಅಽಕಾರಿಗಳು ಈ ರೀತಿ ತಪ್ಪು ಎಸೆಗಿರುವುದು ಯಾಕೆ. ಸಿಇಟಿ ಬರೆಯದೆ ಆ ವಿದ್ಯಾರ್ಥಿಯ ಇಂಜನಿಯರಿAಗ್ ಕನಸು ಭಗ್ನಗೊಂಡಿದೆ. ಅಽಕಾರಿಗಳ ಎಡವಟ್ಟಿನಿಂದ ಆತ ಪರೀಕ್ಷೆ ಬರೆಯದ ಕಾರಣ ಸರ್ಕಾರ ಆತನ ವ್ಯಾಸಂಗಕ್ಕೆ ಸೂಕ್ತ ಅವಕಾಶ ಮಾಡಿಕೊಡಬೇಕು. ಅಲ್ಲದೇ ತಪ್ಪಿತಸ್ಥ ಅಽಕಾರಿಗಳು, ಸಿಬ್ಬಂದಿಯನ್ನು ಕೇವಲ ಅಮಾನತಿನಲ್ಲಿಟ್ಟರೆ ಸಾಲದು ಅವರನ್ನು ಜೈಲಿಗಟ್ಟುವ ಕೆಲಸವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.