ಜಿಲ್ಲೆ

ಸಿಇಟಿ ನಡೆಸಲು ಜಿಲ್ಲಾಡಳಿತ ಸಿದ್ಧತೆ : ಅಪರ ಜಿಲ್ಲಾಧಿಕಾರಿ ಎಚ್​. ಅಮರೇಶ್​ ನೇತೃತ್ವದಲ್ಲಿ ಸಭೆ

ಚಿಕ್ಕಬಳ್ಳಾಪುರ: ವೃತ್ತಿಪರ ಕೋರ್ಸ್​ ಸಾಮಾನ್ಯ ಪ್ರವೇಶ ಪರೀೆಯನ್ನು ಸುಗುಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಿಇಟಿ ಪರೀಕ್ಷಾ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆಯಲ್ಲಿ ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಪರೀೆ ನಡೆಸುವುದರ ಬಗ್ಗೆ ಚಚಿರ್ಸಲಾಯಿತು.

ಜಿಲ್ಲೆಯಲ್ಲಿ ಜೂ.16 ಮತ್ತು ಜೂ.17ರಂದು 12 ಕೇಂದ್ರಗಳಲ್ಲಿ ಪರೀಕ್ಷ ನಡೆಯಲಿದೆ. ಇದಕ್ಕೆ 5,328 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀೆಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡಬಾರದು. ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಚ್​. ಅಮರೇಶ್​ ಸೂಚಿಸಿದರು.

ಪರೀಾ ಕೇಂದ್ರದಲ್ಲಿ ಕರ್ತವ್ಯ ನಿಯೋಜಿತ ಸಿಬ್ಬಂದಿಗೆ ಕಡ್ಡಾಯವಾಗಿ ಗುರುತಿನ ಚೀಟಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಸಜಿರ್ಕಲ್​ ಮಾಸ್ಕ್​ ಧರಿಸಬೇಕು. ಪರೀಕ್ಷಾಥಿರ್ಗಳು ಹಾಗೂ ಕೊಠಡಿ ಮೇಲ್ವಿಚಾರಕರು ಸೇರಿ ಯಾರೇ ಆಗಲಿ ಯಾವುದೇ ತರಹದ ಮೊಬೈಲ್​, ಬ್ಲೂಟೂತ್​, ಪೇಜರ್​, ವೈರೆಲ್ಸ್​ ಸೆಟ್​, ಲಾ ಟೇಬಲ್​, ಕ್ಯಾಲ್ಕುಲೇಟರ್​ ಹಾಗೂ ರಿಸ್ಕ್​ ವಾಚ್​ ಸೇರಿ ಇತರ ಎಲೆಕ್ಟಾ$ನಿಕ್ಸ್​ ವಸ್ತುಗಳನ್ನು ಕೇಂದ್ರದೊಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದರು.

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆನಂದ್​, ಡಿವೈಎಸ್ಪಿ ವಾಸುದೇವ್​ ಮತ್ತಿತರರು ಇದ್ದರು.

ಪರೀಕ್ಷಾ ಕೇಂದ್ರಗಳ ಸಿದ್ಧತೆ: ಪರೀಕ್ಷಾ ಕೇಂದ್ರಗಳಲ್ಲಿ ಕರೊನಾ ಸೋಂಕಿನ ಮುಂಜಾಗ್ರತಾ ಕ್ರಮ ಮತ್ತು ಪರೀಕ್ಷಾ ನಿಯಮಗಳ ಬಗ್ಗೆ ಚಚಿರ್ಸಲಾಯಿತು. ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮರಾ ಹಾಗೂ ವಿದ್ಯಾಥಿರ್ಗಳಿಗೆ ಸಮಯದ ಬಗ್ಗೆ ತಿಳಿದುಕೊಳ್ಳಲು ಕೊಠಡಿಯಲ್ಲಿ ಗಡಿಯಾರ ಅಳವಡಿಕೆ, ಸೂಕ್ತ ಆಸನ, ಕುಡಿಯುವ ನೀರು ಮತ್ತು ಶೌಚಗೃಹ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಯಿತು. ಎಲ್ಲ ಕೇಂದ್ರಗಳಿಗೆ ಒಂದು ದಿನದ ಮುಂಚಿತ ಮತ್ತು ಎರಡು ಅವಧಿಗಳ ಪರೀೆ ಮುಕ್ತಾಯದ ಬಳಿಕ ಸ್ಯಾನಿಟೈಸ್​,ಪರೀಕ್ಷಾ ಕೇಂದ್ರದ ಸುತ್ತಲಿನ ಪ್ರದೇಶದ ಸ್ವಚ್ಛತೆ, ಥರ್ಮಲ್​ ಸ್ಕ್ರಿನಿಂಗ್​ ಮತ್ತು ಹ್ಯಾಂಡ್​ ಸ್ಯಾನಿಟೈಸ್​ಗೆ ಆರೋಗ್ಯ ಸಹಾಯಕಿಯರ ನೇಮಕದ ಚಚಿರ್ಸಲಾಯಿತು.

ಕೇಂದ್ರಗಳ ಸುತ್ತ ನಿಷೇಧಾೆ ಜಾರಿ: ನಿಯಮಾನುಸಾರ ಪರೀಕ್ಷಾ ಕೇಂದ್ರಗಳ ಸುತ್ತಲು 200 ಮೀಟರ್​ ವ್ಯಾಪ್ತಿಯಲ್ಲಿ 144 ಸೆಕ್ಷನ್​ ನಿಷೇಧಾೆ ಜಾರಿಗೊಳಿಸಿ, ನಿರ್ಬಂಧಿತ ಪ್ರದೇಶವೆಂದು ೂಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್​ ತಿಳಿಸಿದ್ದಾರೆ.

ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತಲಿನ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಜೆರಾಕ್ಸ್​ ಅಂಗಡಿ ಮುಚ್ಚಲು, ಪರೀೆಗೆ ಬಿಗಿ ಭದ್ರತೆ ಸೇರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್​ ಇಲಾಖೆಗೆ ಸೂಚಿಸಿದರು.

ಜಿಲ್ಲಾ ತ್ರಿಸದಸ್ಯ ಸಮಿತಿ ರಚನೆ: ಪರೀೆಗಳನ್ನು ಸುಸೂತ್ರವಾಗಿ ನಡೆಸಲು ಮೇಲುಸ್ತುವಾರಿಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ. ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋಗುವಿಕೆ, ಪರೀೆ ಮುಗಿದ ಬಳಿಕ ಲೋಪವಾಗದಂತೆ ನಿಗದಿತ ಸಮಯದಲ್ಲಿ ಜಿಲ್ಲಾ ಖಜಾನೆಗೆ ತಲುಪಿಸುವಿಕೆ, ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಆರೋಗ್ಯ ಹಾಗೂ ಪೊಲೀಸ್​ ಸಿಬ್ಬಂದಿ ನಿಯೋಜನೆ, ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪರೀಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲು ತರಬೇತಿಯ ಬಗ್ಗೆ ಅಗತ್ಯ ಸೂಚನೆ ನೀಡಲಾಗಿದೆ.