ಜಿಲ್ಲೆ

ಸಿಂಧನೂರಿನಲ್ಲಿ ಗಾಯತ್ರಿ ಜಪ ಯಜ್ಞ ಪಾರಾಯಣ

ಸಿಂಧನೂರು: ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜ.18 ಹಾಗೂ 19 ರಂದು ಆಯೋಜಿಸಿರುವ ಸುವರ್ಣ ಸಂಭ್ರಮ ಹಿನ್ನೆಲೆಯಲ್ಲಿ ಭಾನುವಾರ 24 ಕೋಟಿ ಗಾಯತ್ರಿ ಜಪ ಯಜ್ಞ ಪಾರಾಯಣ ನಡೆಯಿತು. ಹನುಮೇಶಚಾರ ಬಾದರ್ಲಿ ಗಾಯತ್ರಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಳಗ್ಗೆ ವಿಧಿವತ್ತಾಗಿ ಪೂಜಾ ಕೈಂಕರ್ಯಗಳೊಂದಿಗೆ ಪಾರಾಯಣ ಮಾಡಲು ಬಂದವರಿಗೆ ಸಂಕಲ್ಪ ಮಾಡಿಸಲಾಯಿತು. ಒಂದು ತಾಸಿಗೂ ಹೆಚ್ಚು ಕಾಲ ಪಾರಾಯಣ ನಡೆಯಿತು. ಹನುಮೇಶಚಾರ್ಯ ಬಾದರ್ಲಿ ಮಾತನಾಡಿ, ಮುಂದಿನ ಭಾನುವಾರ ಸತ್ಯ ಮಾರುತಿ ದೇವಸ್ಥಾನದಲ್ಲಿ ಪಾರಾಯಣ ಜರುಗಲಿದೆ. ಆಸಕ್ತಿಯುಳ್ಳವರು ಬೆಳಗ್ಗೆ 7.30ರೊಳಗೆ ಬರಬೇಕು ಎಂದು ತಿಳಿಸಿದರು.

ಪ್ರಮುಖರಾದ ಅಡವಿರಾವ್ ಸಿದ್ರಾಂಪುರ, ಜಗನ್ನಾಥ್ ಸಿದ್ರಾಂಪುರ, ರಾಘವೇಂದ್ರ ರಾವ್ ದಢೇಸುಗೂರು, ಕೃಷ್ಣಮೂರ್ತಿ, ಬಂಡಿ ರಮೇಶ, ಅನಿಲಕುಮಾರ, ಅಜಯ ಕಾನಿಹಾಳ, ವಿಠ್ಠಲ್ ಕಲ್ಲೂರ ಇದ್ದರು.