ಜಿಲ್ಲೆ

ಸಿಂಡಿಕೇಟ್‌ಗೆ 6 ಸದಸ್ಯರ ನಾಮನಿರ್ದೇಶನ

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಆರು ಜನರನ್ನು ಸಿಂಡಿಕೇಟ್ ಸದಸ್ಯರನ್ನು ನಾಮ ನಿರ್ದೇಶನ ಮಾಡಿ, ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ. ಬೀದರ್‌ನ ಡಾ.ಶ್ರೀದೇವಿ ಕಟ್ಟಿಮನಿ, ಸಿದ್ದಪ್ಪ ಮೂಲಗೆ, ಕಲಬುರಗಿಯ ಸಿದ್ದಪ್ಪ ಸುಳ್ಳದ್ ಕೆರೂರ, ಡಾ.ಫಿರಜಾದ್ ಫಹಿಮುದ್ದೀನ್, ಮಲ್ಲಣ್ಣ ಎಸ್.ಮಡಿವಾಳ, ಉದಯ ಪಾಟೀಲ್ ಅವರನ್ನು ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶವರೆಗೆ ನಾಮನಿರ್ದೇಶನ ಮಾಡಲಾಗಿದೆ.