ಬೇಲೂರು: ಕಾಫಿ ತೋಟದಲ್ಲಿ ಮೆಣಸು ಕೊಯ್ದು ಚೀಲಕ್ಕೆ ತುಂಬುತಿದ್ದ ಸಂದರ್ಭ ಮರಿಯೊಂದಿಗೆ ಆಗಮಿಸಿದ ರೇಡಿಯೋ ಕಾಲರ್ ಹೊಂದಿದ್ದ ಕಾಡಾನೆ, ಏಕಾಏಕಿ ಮೆಣಸಿನ ಚೀಲವನ್ನೆಲ್ಲ ಎಳೆದು ಬಿಸಾಡಿ, ನೆರಳಿಗಾಗಿ ನಿರ್ಮಿಸಿದ್ದ ಶೆಡ್ ಅನ್ನು ತುಳಿದು, ಸಿಂಟೆಕ್ಸ್ ಪುಡಿ ಮಾಡಿರುವ ಘಟನೆ ಅರೇಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಶುಕ್ರವಾರ ಅರೇಹಳ್ಳಿಯ ಕೇಶವ ನಗರದ ನಿವಾಸಿ ಹುಚ್ಚಪ್ಪ ಅವರು, ಹಸಿರು ಗುಡ್ಡದ ಐಬಿಸಿ ಕಾಫಿ ಎಸ್ಟೇಟ್ ಸಮೀಪ 1.45 ಎಕರೆ ಜಮೀನು ಹೊಂದಿದ್ದು, ಗ್ರಾಮದ ಹುಚ್ಚಪ್ಪ ಮತ್ತು ಮನೆಯವರು ತಮ್ಮ ತೋಟದಲ್ಲಿ ಮೆಣಸು ಕೊಯ್ಲು ಮಾಡುತಿದ್ದ ಸಂದರ್ಭ ಶುಕ್ರವಾರ ಸಂಜೆ ಐದು ಗಂಟೆ ಸಮಯದಲ್ಲಿ ಏಕಾ ಏಕಿ ತೋಟದೊಳಕ್ಕೆ ಮರಿಯೊಂದಿಗೆ ನುಗ್ಗಿದ ಕಾಡಾನೆಯನ್ನು ನೋಡಿದ ಹುಚ್ಚಪ್ಪ ಮತ್ತು ಮನೆಯವರು ಮೆನಸಿನ ಚೀಲಗಳನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಸ್ಥಳಕ್ಕಾಗಮಿಸಿದ ಆನೆಗಳು ಮೆಣಸಿನ ಚೀಲಗಳನ್ನೆಲ್ಲೆ ಎಳೆದಾಡಿ ಮೆಣಸನ್ನು ಚೆಲ್ಲಾಪಿಲ್ಲಿ ಮಾಡಿ ಹಾಳು ಮಾಡಿದ್ದಲ್ಲದೆ, ನೆರಳಿಗಾಗಿ ಹಾಕಿದ್ದ ತಾತ್ಕಾಲಿಕ ಶೆಡ್ ಹಾಗೂ ನೀರು ಸಂಗ್ರಹಿಸಿದ್ದ ಸಿಂಟೆಕ್ಸ್‌ನ್ನು ತುಳಿದು ಪುಡಿ ಮಾಡಿ ತೆರಳಿದ್ದು, ಇದನ್ನು ಗಮನಿಸಿದ ಹುಚ್ಚಪ್ಪ ಮತ್ತು ಮನೆಯವರು, ಅಕ್ಕಪಕ್ಕದ ಜಮೀನಿನವರು ಆತಂಕಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಉಪಟಳ ತಪ್ಪಿಸುವಂತೆ ಆಗ್ರಹಿಸಿದ್ದಾರೆ.