ಜಿಲ್ಲೆ

ಸಿಂಗಾಪುರದಲ್ಲಿ ಪ್ರಬಂಧ ಮಂಡನೆ

ಕಲಬುರಗಿ: ಹೈದರಾಬಾದ್​ ರ‍್ನಾಟಕ ಶಿಕ್ಷಣ ಸಂಸ್ಥೆಯ ಎಸ್​. ನಿಜಲಿಂಗಪ್ಪ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮ್ಯಾಕ್ಸಿಲೋಫೇಶಿಯಲ್​ (ಬಾಯಿ ಮತ್ತು ಮುಖ) ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ಜೋಶಿ ಅವರು ಸಿಂಗಾಪುರದಲ್ಲಿ ಮೇನಲ್ಲಿ ನಡೆದ ಅಂತಾರಾಷ್ಟ್ರೀಯ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸೆ ಸಮ್ಮೇಳನದಲ್ಲಿ ಮೂರು ಸಂಶೋಧನಾ ಪ್ರಬಂಧ ಮಂಡಿಸಿ, ಜಿಲ್ಲೆಗೆ ಜಾಗತಿಕ ಮನ್ನಣೆ ತಂದಿದ್ದಾರೆ.

ವಿಶ್ವದ ೧೮೦ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಮ್ಮೇಳನದಲ್ಲಿ ಡಾ.ಜೋಶಿ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆಯ ವೈವಿಧ್ಯಮಯ ಕ್ಷೇತ್ರಗಳನ್ನು ಒಳಗೊಂಡಿದೆ. "ಪೋಸ್ಟ್​ ಟ್ರಾಮ್ಯಾಟಿಕ್​ ಟ್ರಿಸ್ಮಸ್​ ಮ್ಯಾಟ್ರಿಕ್ಸ್​ ರಿದಮ್​ ಚಿಕಿತ್ಸೆ ಪರಿಣಾಮಕಾರಿತ್ವ', "ಮುಖದ ಮಧ್ಯಭಾಗದ ಅಘಾತಕಾರಿ ವಿಘಟನೆಯ ನರ‍್ವಹಣೆ ಒಂದು ಸವಾಲು', "ಮುಖದ ಆಘಾತ ಚಿಕಿತ್ಸೆಯಲ್ಲಿನ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳು' ಸೇರಿ ಮೂರು ವಿಷಯದ ಮೇಲೆ ಪ್ರಬಂಧ ಮಂಡಿಸಿ, ವಿಶ್ವದ ವೈದ್ಯ ಸಮುದಾಯದ ಗಮನ ಸೆಳೆದಿದ್ದಾರೆ.

ವೈದ್ಯರ ಸಾಧನೆಗೆ ಎಚ್​ಕೆಇ ಅಧ್ಯಕ್ಷ, ಎಂಎಲ್​ಸಿ ಶಶೀಲ ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕರ‍್ಯರ‍್ಶಿ ಉದಯಕುಮಾರ್​ ಚಿಂಚೋಳಿ, ಜಂಟಿ ಕರ‍್ಯರ‍್ಶಿ ಡಾ.ಕೈಲಾಸ ಪಾಟೀಲ್​, ದಂತ ವೈದ್ಯಕಿಯ ಕಾಲೇಜಿನ ಸಂಯೋಜಕ ಡಾ.ಅನಿಲಕುಮಾರ ಪಟ್ಟಣ, ಪ್ರಾಂಶುಪಾಲ ಡಾ.ಜಯಶ್ರೀ ಮುದ್ದಾ ಅಭಿನಂದನೆ ತಿಳಿಸಿದ್ದಾರೆ.