ಚಿತ್ತಾಪುರ: ಕಲಬುರಗಿ ಜಿಲ್ಲೆಯ ಆರೋಗ್ಯ ಮತ್ತು ವಿವಿಧ ಕ್ಷೇತ್ರಕ್ಕಾಗಿ ಕೆಲಸ ಮಾಡುವ ಕೆಮಿಸ್ಟ್ ೯೯ (ಸಿ-೯೯) ಎಜುಕೇಷನಲ್ ವೆಲ್‌ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಪಟ್ಟಣದ ಆಸಿಫ್ ಮೆಡಿಕಲ್ ಮಾಲೀಕ ಸೈಯದ್ ನಿಜಾಮುದ್ದೀನ್ ಚಿಸ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮಾಜ ಸೇವೆ ಮತ್ತು ಔಷಧ ವಿತರಣೆ ಹಾಗೂ ವಿವಿಧ ಕ್ಷೇತ್ರದ ಕಾರ್ಯಗಳನ್ನು ಗಮನಿಸಿ ಆಯ್ಕೆ ಮಾಡಲಾಗಿದೆ. ಹಲವು ವರ್ಷಗಳಿಂದ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಚೇಂಬರ್ ಆಫ್ ಕಾಮರ್ಸ್ ಸದಸ್ಯರಾಗಿಯೂ ಗಮನಸೆಳೆದಿದ್ದಾರೆ. ಅಧ್ಯಕ್ಷ ಸೈಯದ್ ನಿಜಾಮುದ್ದೀನ್ ಚಿಸ್ತಿ ಮಾತನಾಡಿ, ಸಿ-೯೯ ಟ್ರಸ್ಟ್ ಸ್ಥಳೀಯರಿಗೆ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಪ್ರಯತ್ನಿಸಲಿದೆ. ಎಲ್ಲರ ಸಹಕಾರದಿಂದ, ಬಡ ಜನರ ಜೀವನದಲ್ಲಿ ಉತ್ತಮ ಬದಲಾವಣೆ ತರಲು ಕೆಲಸ ಮಾಡುತ್ತೇನೆ ಎಂದು ಹೇಳಿದರು. ಪ್ರಮುಖರಾದ ಇರ್ಫಾನ್ ನಾಲವಾರ, ಮಹ್ಮದ್ ವಾಸೀಮ್‌ಖಾನ್, ರಾಕೇಶ ಪವಾರ್, ಸಂದೀಪ್, ಅನೂಪ್ ಉಬಾಳೆ ಇತರರಿದ್ದರು.