ಬಸವಕಲ್ಯಾಣ ತಾಲೂಕಿನ ಹಾರಕೂಡದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎಚ್ ಕಾಶೀನಾಥ ರೆಡ್ಡಿ, ಡಾ.ಹನುಮಂತರಾಯ ದೊಡ್ಡಮನಿ ಹಾಗೂ ನಿಂಗಣ್ಣಗೌಡ ಪೊಲೀಸ್ ಪಾಟೀಲ ಸಿಂಗನಹಳ್ಳಿ ಅವರಿಗೆ ರಾಜ್ಯಮಟ್ಟದ ಜನಪದಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಡಾ.ರಮೇಶ ಲಂಡನಕರ್, ಮಲ್ಲಿನಾಥ ಹಿರೇಮಠ, ನಟರಾಜ ಹಿರೇಮಠ, ಡಾ.ಗವಿಸಿದ್ಧಪ್ಪ ಪಾಟೀಲ್, ಡಾ.ಎಸ್.ಎಸ್. ಗುಬ್ಬಿ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಶಾಂತಮ್ಮ ಸೂಗಯ್ಯ ಹಿರೇಮಠ, ಸಂತೋಷ ನಾಗರಾಳೆ ಇದ್ದರು. 
ಜಿಲ್ಲೆ

ಸಾಹಿತ್ಯಕ್ಕೆ ಸೂಗಯ್ಯ ಕೊಡುಗೆ ಅಪಾರ

ಬಸವಕಲ್ಯಾಣ: ತಳಸ್ಪರ್ಶಿಯ ಚಿಂತನೆ ಹಾಗೂ ಸಾಮಾಜಿಕ ಕಳಕಳಿ ಲಿಂಗೈಕ್ಯ ಪ್ರೊ.ಸೂಗಯ್ಯ ಹಿರೇಮಠ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಸಚಿವ ಡಾ.ರಮೇಶ ಲಂಡನಕರ್ ಹೇಳಿದರು.

ಕಲಬುರಗಿಯ ಪ್ರೊ.ಸೂಗಯ್ಯ ಹಿರೇಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು, ಸೂಗಯ್ಯ ಹಿರೇಮಠರ ಪ್ರಗತಿಪರ ಮತ್ತು ರೈತಪರ ಚಿಂತನೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಮುಂಚೂಣಿಯಲ್ಲಿದ್ದು, ಶ್ರೀಮಠದ ತತ್ವಾದರ್ಶ ಹಾಗೂ ಸಮಾಜಮುಖಿ ಚಿಂತನೆಗಳು ಸದಾ ಪ್ರಸ್ತುತವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಸಾನ್ನಿಧ್ಯ, ಪ.ಮಾನು ಸಗರ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಮತ್ತು ಸಾಹಿತಿ ಡಾ.ಡಿ.ಎನ್. ಅಕ್ಕಿ ಮಾತನಾಡಿದರು. ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಬಸವರಾಜ ಕೊನೇಕ್, ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಮಲ್ಲಿನಾಥ ಹಿರೇಮಠ, ಡಾ.ಎಸ್.ಎಸ್. ಗುಬ್ಬಿ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಶಾಂತಮ್ಮ ಸೂಗಯ್ಯ ಹಿರೇಮಠ, ನಟರಾಜ ಸೂಗಯ್ಯ ಹಿರೇಮಠ, ನ್ಯಾಯವಾದಿ ಸಂತೋಷ ನಾಗರಾಳೆ ಉಪಸ್ಥಿತರಿದ್ದರು.

ಬಸವರಾಜ ಐನೋಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನರಸಪ್ಪ ಗೌನಳ್ಳಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆಗೀತೆ ಹಾಡಿದರು. ಪ್ರಶಸ್ತಿ ಸ್ವೀಕರಿಸಿದ ಜನಪದ ಕಲಾವಿದ ನಿಂಗಣ್ಣಗೌಡ ಸಿಂಗನಹಳ್ಳಿ ದೊಡ್ಡಾಟದ ಹಾಡುಗಳನ್ನು ಹಾಡಿದರು.

ಜಾನಪದ ವಿದ್ವಾಂಸ ಎಚ್. ಕಾಶೀನಾಥರೆಡ್ಡಿ, ಹಿರಿಯ ಸಾಹಿತಿ ಡಾ.ಹನುಮಂತರಾಯ ದೊಡ್ಡಮನಿ ಮಲ್ಲಾಬಾದ್ ಹಾಗೂ ಜನಪದ ರಂಗಭೂಮಿ ಕಲಾವಿದ ನಿಂಗಣ್ಣಗೌಡ ಪೊಲೀಸ್ ಪಾಟೀಲ್ ಸಿಂಗನಹಳ್ಳಿ ಅವರಿಗೆ ೨೦೨೪ರ ರಾಜ್ಯ ಮಟ್ಟದ ಜನಪದಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ಜಯದೇವಿ ಗಾಯಕವಾಡ ಸಂಪಾದಿತ ಸೂಗಯ್ಯ ಹಿರೇಮಠ ವಾಚಿಕೆ, ಸುಜಾತ ಗೌನಳ್ಳಿ ಸಂಪಾದಿತ ಒಮ್ಮೆ ನೋಡು ಹಾರಕೂಡ ಮಠ ಹಾಗೂ ರಾಮಯ್ಯ ಐನುಲಿಸ್ವಾಮಿ ರಚಿಸಿದ ಭಕ್ತಿಗೀತೆಗಳ ಪುಸ್ತಕಗಳನ್ನು ಹಾರಕೂಡ ಶ್ರೀಗಳು ಬಿಡುಗಡೆಗೊಳಿಸಿದರು.

ಹಲವರಿಗೆ ಗೌರವ ಪುರಸ್ಕಾರ: ವಿವಿಧ ಕ್ಷೇತ್ರದ ಸಾಧಕರಾದ ಮುದುಕಾ ಬಸವರಾಜ ಬೀದರ್, ವೈಜನಾಥ ಎಂ.ಚನ್ನಶೆಟ್ಟಿ ಬೀದರ್, ಶಿವಶರಣ ಎಸ್.ಬಾಳಿ ಕಲಬುರಗಿ, ವಿ.ಬಿ. ಐರಡ್ಡಿ ರಾಯಚೂರು, ಡಾ.ಎಸ್.ಬಿ. ಕಾಮಶೆಟ್ಟಿ ಕಲಬುರಗಿ, ಬಿ.ಎಸ್. ಮಾಲಿಪಾಟೀಲ್ ಕಲಬುರಗಿ (ಶಿಕ್ಷಣ), ಡಾ.ವಿಜಯಕುಮಾರ ಪರೂತೆ ಕಲಬುರಗಿ, ನೀಲಮ್ಮ ಕತ್ನಳ್ಳಿ ಕಲಬುರಗಿ, ಶೋಭಾ ಚಕ್ಕಿ ಸೇಡಂ (ಸಾಹಿತ್ಯ), ನಾರಾಯಣ ಸಿಂಗಾಡೆ ಕಲಬುರಗಿ, ನೀಲಕಂಠ ಜಮಾದಾರ ಕಲಬುರಗಿ (ಸಮಾಜ ಸೇವೆ), ಮೀನಾಕ್ಷಿ ಎ.ಗುತ್ತೇದಾರ್ ಕಲಬುರಗಿ (ಚಿತ್ರಕಲಾ) ಅವರಿಗೆ ಪ್ರೊ.ಸೂಗಯ್ಯ ಹಿರೇಮಠ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.