ಸುರಪುರ : ಕಲೆ, ಸಾಹಿತ್ಯಕ್ಕೆ ಸುರಪುರದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ನಗರದ ಗೃಹ ಕಚೇರಿಯಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ವೈದ್ಯ ಪದವೀಧರನಾಗಿದ್ದರೂ ಸಾಹಿತ್ಯ ಅಭಿರುಚಿ ಇದೆ. ನಾನು ಶಾಸಕನಾಗಿದ್ದಾಗಲೇ ಅದ್ದೂರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಸುರಪುರ ಕೊಡುಗೆ ಅನನ್ಯವಾಗಿದೆ. ತಾಲೂಕು ಕಸಾಪಕ್ಕೆ ಶೀಘ್ರ ನಿವೇಶನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಸಾಹಿತಿಗಳಾದ ಶಾಂತಪ್ಪ ಬೂದಿಹಾಳ, ನಬೀಲಾಲ್ ಮಕಾನ್‌ದಾರ್, ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಸೂಗೂರೇಶ ವಾರದ, ಸಿದ್ದಣ್ಣ ದಿಗ್ಗಾವಿ, ಭಂಡಾರೆಪ್ಪ ನಾಟೇಕಾರ, ಮಹೇಶ ಜಾಗೀರದಾರ್, ಕಸಾಪ ಗೌರವ ಕಾರ್ಯದರ್ಶಿ ಹೇಮಲು ರಾಠೋಡ್, ಶಿಕ್ಷಕ ದೊಡ್ಡ ಮಲ್ಲಿಕಾರ್ಜುನ, ಕಸಾಪ ಗೌರವ ಕೋಶಾಧ್ಯಕ್ಷÀ ವೆಂಕಟೇಶ ಪಾಟೀಲ್, ಖಾದರ್ ಪಟೇಲ್, ಶರಣಗೌಡ ಪಾಟೀಲ್ ಜೈನಾಪುರ, ಮಲ್ಲಿಕಾರ್ಜುನ, ಪ್ರಕಾಶ ಬಣಗಾರ, ಹಣಮಂತರಾಯ ಭಜಂತ್ರಿ, ಡಾ.ಸಾಯಿನಂದ, ಕಮಲಾಕರ್ ಇತರರಿದ್ದರು.