ಪಶ್ಚಿಮ ಬಂಗಾಳದ ಸಾಸ್ವತಿ ಜಾನ್ ಕೊಲೆ ಖಂಡಿಸಿ ಕಟಕೋಳದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಉಪ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ರೇಖಾ ಚಿನ್ನಾಕಟ್ಟಿ, ಬಸವಣ್ಣೆವ್ವ ದ್ಯಾಮನಗೌಡ್ರ ಇತರರಿದ್ದರು. 
ಜಿಲ್ಲೆ

ಸಾಸ್ವತಿ ಜಾನ್ ಕೊಲೆ ಖಂಡಿಸಿ ರಾಷ್ಟ್ರಪತಿಗೆ ಮನವಿ

ಕಟಕೋಳ: ಪಶ್ಚಿಮ ಬಂಗಾಳದ ಬಿಜೆಪಿ ಬೆಂಬಲಿತೆ ಸಾಸ್ವತಿ ಜಾನ್ ಕೊಲೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಉಪ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬೆಳಗಾವಿ ಮಹಿಳಾ ಮೋರ್ಚಾ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಚಿನ್ನಾಕಟ್ಟಿ, ಪಶ್ಚಿಮ ಬಂಗಾಳ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಟಿಎಂಸಿ ಕಾರ್ಯಕರ್ತರು ಸೇರಿ ಹಾಡಹಗಲೇ ಸಾಸ್ವತಿ ಜಾನ್‌ರನ್ನು ಕೊಲೆ ಮಾಡಲಾಗಿದೆ. ಅಲ್ಲದೆ, ಅನೇಕ ಮಹಿಳಾ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಅನೇಕ ಮನೆಗಳಿಗೆ ಬೆಂಕಿ ಹಚ್ಚಿ ಧ್ವಂಸ ಮಾಡಿಸಿರುತ್ತಾರೆ. ಕೂಡಲೇ ಪಶ್ಚಿಮ ಬಂಗಾಳದ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿ ಎಂದು ಆಗ್ರಹಿಸಿದರು.

ಕಟಕೋಳ ಗ್ರಾಪಂ ಅಧ್ಯಕ್ಷೆ ಸರಸ್ವತಿ ನಿಂಗಣ್ಣವರ, ಚುಂಚನೂರ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಮಾದರ, ರಾಮದುರ್ಗ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವಣ್ಯವ್ವ ದ್ಯಾಮನಗೌಡ್ರ, ಕಟಕೋಳ ಗ್ರಾಪಂ ಸದಸ್ಯೆ ಕವಿತಾ ಹೊಸಮನಿ, ತೋರಣಗಟ್ಟಿ ಗ್ರಾಪಂ ಸದಸ್ಯೆ ಸಿದ್ದವ್ವ ಮಾಯಣ್ಣವರ, ರೇಣುಕಾ ಹನುಮಣ್ಣವರ, ಚುಂಚನೂರ ಗ್ರಾಪಂ ಸದಸ್ಯೆ ಭಾರತಿ ಪತ್ತಾರ ಇತರರು ಇದ್ದರು.