ಕೋಟ: ಸಾಸ್ತಾನ ಮುಖ್ಯ ಪೇಟೆಯಲ್ಲಿ ಅಜ್ಜ ಅಜ್ಜಿಯ ಹೆಸರಿನಲ್ಲಿ ಮೊಮ್ಮಗ ತನ್ನ ೬ಲಕ್ಷ ರೂ ವಿನಿಯೋಗಿಸಿ ನಿರ್ಮಿಸಲಾದ ಬಸ್ ತಂಗುದಾಣವನ್ನು ಉಡುಪಿ ಶ್ರೀ ಕೃಷ್ಣಪೇಜಾವರಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ಎ.14ರ ಬುಧವಾರ ಲೋಕಾರ್ಪಣೆಗೊಳಿಸಲಿದ್ದಾರೆ.ಸಾಸ್ತಾನದ ಸಂತ ಅಂತೋನಿ ಚಚ್೯ನ ಧರ್ಮಗುರು ಜಾನ್ ವಾಲ್ಟರ್ ಮೆಂಡೋನ್ಸಾ ನುಡಿಮುತ್ತು ಫಲಕವನ್ನು ಅನಾವರಣಗೈಯಲಿದ್ದು, ಪ್ರಾಣಿ ಪಕ್ಷಿಗಳಿ ನಿರ್ಮಿಸಲಾದ ಕುಡಿಯುವ ನೀರಿನ ಕುಂಡಲಿಯನ್ನು ಶ್ರೀಮತಿ ಮಯ್ಯ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಲೆಕ್ಕಪರಿಶೋಧಕ ರಾಘವೇಂದ್ರ ಮಯ್ಯ,ವೇ.ಮೂ.ಮಧುಸೂದನ ಬಾಯಿರಿ ಉಪಸ್ಥಿತರಿರಲಿದ್ದಾರೆ.ಎಂದು ಬಸ್ ತಂಗುದಾಣದ ರೂವಾರಿ ಚಂದ್ರಶೇಖರ ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.