ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿನ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆ ಶನಿವಾರ ನಡೆಯಿತು. ಪ್ರಕಾಶ್, ಗೋಪಾಲಕೃಷ್ಣ, ಪ್ರಸನ್ನ, ತಿಪ್ಪೇಶ್, ಕಾಂತೇಶ್, ವನಜಾಕ್ಷಿ, ಪೂರ್ಣಿಮಾ ಇದ್ದರು. 
ಜಿಲ್ಲೆ

ಸಾಸಲು ದೇಗುಲ ಹುಂಡಿ ಹಣ ಎಣಿಕೆ

ಕಿಕ್ಕೇರಿ: ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿಯಲ್ಲಿ 4.89 ಲಕ್ಷ ರೂ. ಕಾಣಿಗೆ ಹಣ ಸಂಗ್ರಹವಾಗಿದೆ.

ತಹಸೀಲ್ದಾರ್ ನಿಸರ್ಗಪ್ರಿಯ ಅವರ ಮಾರ್ಗದರ್ಶನದಲ್ಲಿ ಶನಿವಾರ ಹುಂಡಿ ಹಣ ಎಣಿಕೆ ನಡೆಯಿತು. ಭಕ್ತರು ಕಾಣಿಕೆಯೊಂದಿಗೆ ಬೆಳ್ಳಿ ಲೇಪನದ ನಾಗರಸೆಡೆಗಳನ್ನೂ ಸಮರ್ಪಿಸಿರುವುದು ವಿಶೇಷವಾಗಿತ್ತು. ಕಂದಾಯ ಇಲಾಖೆ ಸಿಬ್ಬಂದಿ 16 ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಎಣಿಕೆ ಮಾಡಿ ಬ್ಯಾಂಕಿನ ಮುಜರಾಯಿ ಇಲಾಖೆ ಖಾತೆಗೆ ಜಮಾ ಮಾಡಿದ್ದಾರೆ. ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಲೆಕ್ಕಿಗರಾದ ಪ್ರಸನ್ನ, ತಿಪ್ಪೇಶ್, ಕಾಂತೇಶ್, ವನಜಾಕ್ಷಿ, ಮುಜರಾಯಿ ಇಲಾಖೆ ಸಹಾಯಕಿ ಪೂರ್ಣಿಮಾ ಇತರರು ಇದ್ದರು.