ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ಗ್ರಾ.ಪಂ. ನೂತನ ಉಪಾಧ್ಯಕ್ಷರಾಗಿ ಸಾಸಲು ಈರಾಜು ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಈರಾಜು ಹೊರತುಪಡಿಸಿ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ನೂತನ ಉಪಾಧ್ಯಕ್ಷ ಈರಾಜು ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಪಕ್ಷಭೇದ ಮರೆತು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಚುನಾವಣಾಧಿಕಾರಿಗಳಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್‌ಕುಮಾರ್, ತಾ.ಪಂ. ವ್ಯವಸ್ಥಾಪಕ ಅನಿಲ್‌ಬಾಬು, ಪಿಡಿಒ ಬಿ.ಎಸ್. ವಿಜಯ್ ಕಾರ್ಯನಿರ್ವಹಿಸಿದರು.
ಟಿ.ಎ.ಪಿ.ಎಂ.ಸ್ ಮಾಜಿ ನಿರ್ದೇಶಕ ಉದಯ್‌ಶಂಕರ್, ಐನೋರಹಳ್ಳಿ ಮಲ್ಲೇಶ್, ಚಂದ್ರಣ್ಣ, ಅರ್ಚಕ ಶಂಭುಲಿಂಗಪ್ಪ, ಚೇರ್ಮನ್ ಮಂಜಣ್ಣ, ಗ್ರಾ.ಪಂ. ಅಧ್ಯಕ್ಷೆ ಅಂಬುಜಾ, ಸದಸ್ಯ ನಂಜುಂಡೇಗೌಡ, ಕುಮಾರ್, ದೇವರಾಜು, ಪ್ರಸನ್ನ, ಪಲ್ಲವಿ, ನಾಗಮಣಿ, ಮಂಜೇಗೌಡ, ಶಂಕರ, ಭಾಗ್ಯಮ್ಮ, ಸುಧಾ, ಸುವರ್ಣಾ, ಸುಮಿತ್ರಾ, ಕೆ.ಎಸ್, ಕವಿತಾ ಹಾಗೂ ಗ್ರಾಮದ ಮುಖಂಡರು ಇದ್ದರು.