ಜಿಲ್ಲೆ

ಸಾವಿನಲ್ಲೂ ಒಂದಾದ ಸಹೋದರರು

ಲಕ್ಷ್ಮೇಶ್ವರ: ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಮಾತಿದೆ. ಆದರೆ, ತಾಲೂಕಿನ ಗೋವನಾಳ ಗ್ರಾಮದಲ್ಲಿ ಸಹೋದರರಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.

ಬಸವನಗೌಡ ಶಿವನಗೌಡ ಭುವನಗೌಡ್ರ (75) ಹಾಗೂ ಅವರ ಸಹೋದರ ಯಲ್ಲಪ್ಪಗೌಡ ಶಿವನಗೌಡ ಭುವನಗೌಡ್ರ (72) ಇಬ್ಬರೂ ಬುಧವಾರ ಇಹಲೋಕ ತ್ಯಜಿಸಿದ್ದಾರೆ. ಇಬ್ಬರೂ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಅವರ ನಡವಳಿಕೆ ಗ್ರಾಮಸ್ಥರಿಗೆ ಮಾದರಿಯಾಗಿತ್ತು. ಎಂಟು ವರ್ಷದಿಂದ ಅಣ್ಣ ಬಸವನಗೌಡ ಪಾರ್ಶ್ವವಾಯು ಪೀಡಿತವಾಗಿದ್ದರು. ತಮ್ಮ ಯಲ್ಲಪ್ಪಗೌಡ ಕೂಡ ವಾರದ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದರು. ಬುಧವಾರ ನಸುಕಿನ ವೇಳೆ ಬಸವನಗೌಡ ಸಾವಿಗೀಡಾದರು, ಈ ಸುದ್ದಿ ಯಲ್ಲಪ್ಪಗೌಡರಿಗೆ ತಿಳಿಯುತ್ತಿದ್ದಂತೆ ಆತನೂ ಅರೆ ತಕ್ಷಣದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಈ ಸಹೋದರರ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಎರಡೂ ಮೃತದೇಹಗಳನ್ನು ಗ್ರಾಮಸ್ಥರು ಒಂದೇ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿ ಕಂಬನಿ ಮಿಡಿದರು. ಒಡಹುಟ್ಟಿದವರು ಜೀವನದಲ್ಲಿ ಹೇಗೆ ಜತೆಗೂಡಿ ಬೆಳೆದು ಬಾಳಿದರೋ ಹಾಗೆಯೇ ಸಾವಿನಲ್ಲಿಯೂ ಒಂದಾಗಿರುವುದು ವಿಪರ್ಯಾಸ.