ಎಂ.ಕೆ.ಹುಬ್ಬಳ್ಳಿ, ಬೆಳಗಾವಿ: ರಾಸಾಯನಿಕ ಮಿಶ್ರಿತ ಬೆಳೆಯಿಂದ ಭೂಮಿ ಲವತ್ತತೆ ಕಳೆದುಕೊಳ್ಳುವ ಜತೆಗೆ ಆಹಾರ ವಿಷವಾಗುತ್ತಿದ್ದು, ಮನುಕುಲದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರೈತರು, ಸಾವಯವ ಕಷಿ ಮೂಲಕ ಪಾರಂಪರಿಕ ಕಷಿಗೆ ಒತ್ತು ಕೊಟ್ಟು ಆರೋಗ್ಯಕರ ಆಹಾರ ಉತ್ಪಾದಿಸಬೇಕು ಎಂದು ಕೊಲ್ಲಾಪುರ ಕನ್ಹೇರಿ ಮಠದ ಅದಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊಳಿಹೊಸುರ ರಸ್ತೆ ಪಕ್ಕದ ಅನುಭವ ಮಂಟಪ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಶ್ರೀಗಳ ನಡೆ, ರೈತರ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಒಂದೇ ಬೆಳೆಗೆ ಅಂಟಿಕೊಳ್ಳದೆ, ವಿವಿಧ ಬೆಳೆಗಳ ಮೂಲಕ ಆದಾಯ ವದ್ಧಿಸಿಕೊಳ್ಳಬೇಕು. ಎಲ್ಲರಿಗೂ ಅನ್ನ ನೀಡುವ ರೈತ ಎಂದಿಗೂ ಬೇಡುವವನಲ್ಲ. ಆದರೆ, ರೈತನ ಸ್ಥಿತಿ ಇಂದು ಶೋಷಣೆಗೆ ಒಳಗಾಗಿದೆ. ಇಂದಿನ ಆಧುನಿಕ ಯುಗದಲ್ಲಿ ರೈತರು ಶ್ರಮ ಜೀವನ ಮರೆಯುತ್ತಿದ್ದು, ಒಕ್ಕಲುತನ ನಶಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರೊನಾ ವೈರಸ್ ಬಿಟ್ಟಹಾಗೆ, ಯಾವುದೋ ಸೋಂಕು ಹರಡಿಸಿ ನಮ್ಮ ದೇಸಿ ಜಾನುವಾರುಗಳಿಗೆ ಗಂಟುರೋಗ ಹರಡಿಸಿರಬಹುದು ಎಂಬುದು ನನ್ನ ಊಹೆಯಾಗಿದೆ. ನಮ್ಮ ಮಠದಿಂದ ಜಾನುವಾರುಗಳ ಚರ್ಮಗಂಟು ರೋಗಕ್ಕಾಗಿ ಉಚಿತ ಔಷಧ ವಿತರಿಸುತ್ತಿದ್ದೇನೆ. ಸಾವಯವ ಕಷಿ ಮತ್ತು ರೈತರ ಅಭಿವದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಡಾ.ಜಗದೀಶ ಹಾರುಗೊಪ್ಪ ಕಾರ್ಯ ಮೆಚ್ಚುವಂತದ್ದು ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಕಾರ್ಯವಾಹ ರಾಘವೇಂದ್ರ ಕಾಗವಾಡ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಚರ್ಮಗಂಟು ರೋಗ ನಿವಾರಕ ಔಷಧ ಹಾಗೂ ಗೋಕಪಾಮತವನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮ ಸಂಯೋಕ ಡಾ. ಜಗದೀಶ ಹಾರುಗೊಪ್ಪ, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಮುಮ್ಮಿಗಟ್ಟಿಯ ಬಸವಾನಂದ ಸ್ವಾಮೀಜಿ, ದೇವರಶೀಗಿಹಳ್ಳಿ ಶ್ರೀಗುರು ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ, ದೇಗುಲಹಳ್ಳಿಯ ವೀರೇಶ್ವರ ಸ್ವಾಮೀಜಿ, ಪಾರಿಶ್ವಾಡದ ಶಾಂಡಿಲೇಶ್ವರ ಸ್ವಾಮೀಜಿ, ದತ್ತವಾಡದ ಋಷಿಕೇಶಾನಂದ ಸ್ವಾಮೀಜಿ, ದಾವಣಗೇರೆಯ ದಿವ್ಯಯೋಗಾಶ್ರಮದ ಅಶೋಕ ಗುರೂಜಿ, ಮಹಿಮಾ ಪಟೇಲ, ಕಮಲಾ ಗಣಾಚಾರಿ, ಶಂಕರಗೌಡ ಮುದೇನೂರ, ಸಂದೀಪ ದೇಶಪಾಂಡೆ, ಚಿನ್ನಪ್ಪ ಮುತ್ನಾಳ ಇತರರು ಇದ್ದರು.