ಸೋಮವಾರಪೇಟೆ: ಲಯನ್ಸ್ ಕ್ಲಬ್ ವತಿಯಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ತಜ್ಞರಾದ ಅರೇಹಳ್ಳಿ ಗ್ರಾಮದ ವಿಜಯಪ್ರಕಾಶ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾವಯವ ಗೊಬ್ಬರ ಬಳಸಿ ಕೃಷಿ ಮಾಡುವುದು ಲಾಭದಾಯಕ. ಉತ್ಪಾದನಾ ವೆಚ್ಚ ಕಡಿಮೆಯಾದಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ. ಸಾವಯವ ಆಹಾರ ಬೆಳೆಗಳನ್ನು ಸೇವಿಸಿದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಲಯನ್ಸ್ ಅಧ್ಯಕ್ಷ ರೋಹಿತ್, ಕಾರ್ಯದರ್ಶಿ ಕೆ.ಎನ್.ತೇಜಸ್ವಿ, ಖಜಾಂಚಿ ಜಿ.ಟಿ.ಯೋಗೇಂದ್ರ, ಮಾಜಿ ಅಧ್ಯಕ್ಷರಾದ ಸಿ.ಕೆ.ಮಲ್ಲಪ್ಪ, ಎ.ಎಸ್.ಮಹೇಶ್, ಹಿರಿಯ ಪದಾಧಿಕಾರಿಗಳಾದ ಎಸ್.ಬಿ.ಲೀಲಾರಾಂ, ಮಂಜುನಾಥ್ ಚೌಟ, ರಾಮಚಂದ್ರ, ರಾಮಶೆಟ್ಟಿ. ಲಿಂಗಪ್ಪ, ವೀರಪ್ಪ, ಲಿಂಗರಾಜು, ಅಮೃತ, ಶಶಿಕಲ, ಆಶಾ, ಗಂಗಮ್ಮ, ಮಲ್ಲಪ್ಪ ಇದ್ದರು.