Saleshwar New Theru Parade 
ಜಿಲ್ಲೆ

ಸಾಲೇಶ್ವರ ನೂತನ ತೇರು ಮೆರವಣಿಗೆ

ಗುಳೇದಗುಡ್ಡ: ಪಟ್ಟಣದ ಹೊಸಪೇಟೆ ಭಾಗದ ಆರಾಧ್ಯ ದೈವ ಸಾಲೇಶ್ವರ ದೇವಸ್ಥಾನದ ನೂತನ ರಥದ ಮೆರವಣಿಗೆ ಪಟ್ಟಣದಲ್ಲಿ ಸಂಭ್ರಮದಿಂದ ಸೋಮವಾರ ನಡೆಯಿತು.

ಬಸವೇಶ್ವರ ನಗರದ ಕಟ್ಟಿಗೆ ಕೆತ್ತನೆ ಕಲಾವಿದ ಚಂದ್ರಶೇಖರ ಬಡಿಗೇರ ಅವರ ಅಡ್ಡೆಯಿಂದ ಮೆರವಣಿಗೆ ಆರಂಭಗೊಂಡು ಕಮತಗಿ ಕ್ರಾಸ್ ಸರ್ಕಲ್, ಪವಾರ್ ಕ್ರಾಸ್, ಪುರಸಭೆ, ಅರಳಿಕಟ್ಟೆ, ಚೌಬಜಾರ, ಗಚ್ಚಿನಕಟ್ಟಿ, ಕಂಠಿಪೇಟೆ, ಸರಾ ಬಜಾರ, ಮರಡಿಮಠದ ಮೂಲಕ ಹಾಯ್ದು ಸಾಲೇಶ್ವರ ದೇವಸ್ಥಾನದ ತೇರಿನ ಮನೆ ತಲುಪಿತು. ಭಾವಿಯವರ ನಾಟ್ಯ ಸಂಘದಿಂದ ಕರಡಿಮಜಲು ಹಾಗೂ ಮಹಿಳೆಯರ ಕಳಸಾರತಿ ಮೆರವಣಿಗೆಗೆ ಮೆರಗು ತಂದಿತು.

ಅಡ್ಡೆಯಲ್ಲಿ ತೇರಿನ ಬಿಡಿ ಭಾಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು, ಮುರುನಾಳದ ಮಳೆರಾಜೇಂದ್ರ ಸ್ವಾಮಿಗಳು, ಬಸಪ್ಪಜ್ಜ ಸಾನ್ನಿಧ್ಯ ವಹಿಸಿದ್ದರು.

ನೂತನ ತೇರಿನ ಮೆರವಣಿಗೆಯಲ್ಲಿ ಹೊಳಬಸು ಶೆಟ್ಟರ, ನಾಗೇಶಪ್ಪ ಪಾಗಿ, ರವೀಂದ್ರ ಗೌಡ್ರ, ಸುರೇಶ ಮೆಗೆನ್ನಿ, ಗೌರಿಶಪ್ಪ ಭಾವಿ, ಸಂಗಪ್ಪ ಜವಳಿ, ಅಯ್ಯಪ್ಪ ವಾಳದುಂಕಿ, ರಾಜಶೇಖರ ಪಾಗಿ, ಸಿದ್ದಪ್ಪ ಮಾಳಗಿ, ದೊಡ್ಡಬಸು ಉಂಕಿ, ಅಶೋಕ ವಾಳದುಂಕಿ, ಗದಿಗೆಪ್ಪ ರಾಜನಾಳ, ಚಂದ್ರಶೇಖರ ತಾಂಡೂರ, ಅಶೋಕ ರೋಜಿ, ಸಂತೋಷ ತಿಪ್ಪಾ, ಸೋಮಶೇಖರ ಕಲಬುರ್ಗಿ, ಸಿದ್ದು ಕಲ್ಲೂರ, ಶಶಿ ಜ್ಯಾಲಿಹಾಳ, ಈರಣ್ಣ ಶೇಖಾ, ದಾನಪ್ಪ ಚಲ್ಲಾ, ವಿರುಪಾಕ್ಷಿ ರೊಡಗೈ, ಬಸವರಾಜ ಯಲವಗಿ, ಮುತ್ತಣ್ಣ ದೇವರಮನಿ, ಚಿದಾನಂದ ಮಸಬಿನಾಳ, ಶಂಕರ ಲಕ್ಕುಂಡಿ, ಶಂಕ್ರಪ್ಪ ಬಡಿಗೇರ, ವಿನಾಯಕ ಬಡಿಗೇರ, ಪ್ರಹ್ಲಾದ ಬಡಿಗೇರ ಇತರರು ಇದ್ದರು.