ಜಿಲ್ಲೆ

ಸಾಲವನ್ನು ಉತ್ಪಾದನಾ ಚಟುವಟಿಕೆಗಳಿಗೆ ಬಳಸಿ

ಗುಂಡ್ಲುಪೇಟೆ: ರೈತರು ಸಹಕಾರ ಸಂಘದಿಂದ ಪಡೆದ ಸಾಲವನ್ನು ಉತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಭೋಗಯ್ಯನಹುಂಡಿ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ ಹೇಳಿದರು.

ತಾಲೂಕಿನ ಕೋಟೆಕೆರೆ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಸಂಘಕ್ಕೆ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ, ರೈತರಿಗೆ ಸಕಾಲದಲ್ಲಿ ಸಾಲ ನೀಡಲು ಸಾಧ್ಯವಾಗುತ್ತದೆ. ಅಲ್ಲದೆ ವಿಳಂಬ ಪಾವತಿಗೆ ಹೆಚ್ಚುವರಿ ಬಡ್ಡಿ ಕಟ್ಟಬೇಕಾಗುತ್ತದೆ. ಆದ್ದರಿಂದ ಕಾಲಕಾಲಕ್ಕೆ ಸಾಲ ಪಾವತಿ ಮಾಡುವಂತಾಗಬೇಕು ಎಂದು ಹೇಳಿದರು.

ಸಂಘವನ್ನು ಲಾಭದಾಯಕವಾಗಿ ಮಾಡಲು ಮುಂದಿನ ದಿನಗಳಲ್ಲಿ ಪಹಣಿ, ಎಂಆರ್, ರಸಗೊಬ್ಬರ, ಕೀಟನಾಶಕ ಕೊಡುವ ಚಿಂತನೆ ಸರ್ಕಾರ ಮಟ್ಟದಲ್ಲಿ ಇರುವುದರಿಂದ ರೈತರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ಉಪಾಧ್ಯಕ್ಷ ರಾಮಕೃಷ್ಣಯ್ಯ, ನಿರ್ದೇಶಕರಾದ ಗಣೇಶ್, ಮಹೇಶ್, ಸದಾಶಿವಪ್ಪ, ರಾಮೇಗೌಡ, ಬಸಪ್ಪದೇವರು, ಪುಟ್ಟಸ್ವಾಮಿ, ಶೇಖರ್, ಹೊಣಕಾರ ನಾಯಕ, ರತ್ನಮ್ಮ, ಶಿವಮ್ಮ, ಕಾರ್ತಿಕ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದೊರೆಸ್ವಾಮಿ, ಸಿಬ್ಬಂದಿ ಶೀಲಾಮಣಿ, ನಟರಾಜು ಮತ್ತಿತರರಿದ್ದರು.